ತೆಲಂಗಾಣದ ಲೈನ್‌ವುಮನ್‌ಗಳ ರೋಚಕ ಕಥೆ ಹಾಗೂ ಪಾಂಡವಪುರದ ಸರ್ಕಾರಿ ಹಾಸ್ಟೆಲ್‌ನಲ್ಲಿ ಅನುಚಿತವಾಗಿ ವರ್ತಿಸಿದ ಮುಖ್ಯ ಶಿಕ್ಷಕನಿಗೆ ವಿದ್ಯಾರ್ಥಿನಿಯರು ಅಟ್ಟಾಡಿಸಿ ಹೊಡೆದ ಸಾಹಸದ ಸುದ್ದಿಗಳು (ಪ್ರ.ವಾ., ಡಿ. 16) ಹೆಣ್ಣುಮಕ್ಕಳ ಮನೋಬಲಕ್ಕೆ ನಿದರ್ಶನವಾಗಿವೆ. ಹೆಣ್ಣು ಎಂದರೆ ಬಲಹೀನ, ಭೋಗದ ವಸ್ತು ಎಂಬ ಪುರುಷ ಪ್ರಧಾನ ಸಮಾಜದ ಧೋರಣೆಯು ಬದಲಾಗಲೇಬೇಕಾದ ಅನಿವಾರ್ಯ ಸ್ಥಿತಿಯ ಸಂದೇಶವನ್ನು ಕೊಟ್ಟಿವೆ. ಇನ್ನಾದರೂ ‘ಕೈಗೆ ಬಳೆ ತೊಟ್ಟಿಲ್ಲ’ ಎಂಬಂತಹ ಮಾತು ಹಾಗೂ ಅನುಚಿತ ವರ್ತನೆಗಳಿಗೆ ಆರಂಭದಲ್ಲೇ ಬಿಸಿ ಮುಟ್ಟಿಸಲು ಹೆಣ್ಣುಮಕ್ಕಳು ಒಂದಾಗಬೇಕಿದೆ.
- ವಿನ್ಸೆಂಟ್ ಪಿಂಟೊ,ಮಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.