ರಾಜ್ಯ ಸರ್ಕಾರ ಒಂದೆಡೆ ಭಿಕ್ಷಾಟನೆಯನ್ನು ಪ್ರೋತ್ಸಾಹಿಸಬೇಡಿ. ಭಿಕ್ಷಾಟನೆ ಒಂದು ಪಿಡುಗು. ಅದನ್ನು ತೊಲಗಿಸಿ ಎಂದು ರೆಡಿಯೋ ಮೂಲಕ ಪ್ರಚಾರ ಮಾಡುತ್ತದೆ. ಇನ್ನೊಂದೆಡೆ ನಗರಸಭೆ ಮೂಲಕ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಸಿಕೊಳ್ಳುವಾಗ ಭಿಕ್ಷಾಟನೆ ಕರವನ್ನು ಸಂಗ್ರಹಿಸುತ್ತದೆ. ಇದು ಸರ್ಕಾರದ ದ್ವಂದ್ವ ನೀತಿಯಾಗಿದೆ. ಇದು ನಿಲ್ಲಬೇಕು. ಸಂಗ್ರಹಿಸಿದ ಭಿಕ್ಷಾಟನೆ ಕರದಿಂದ ಭಿಕ್ಷುಕರಿಗೆ ಪುನರ್ವಸತಿ ನೀಡಿದ ಉದಾಹರಣೆಗಳಂತೂ ಕಂಡು ಬಂದಿಲ್ಲ. ಆದಾಗ್ಯೂ ಭಿಕ್ಷಾಟನೆ ಕರವನ್ನು ಸಂಗ್ರಹಿಸಲಾಗುತ್ತದೆ. ಭಿಕ್ಷಾಟನೆ ಕರ ಸಂಗ್ರಹ ನಿಲ್ಲಲಿ.
–ಡಾ.ಟಿ.ಪಿ. ಗಿರಡ್ಡಿ, ಜಮಖಂಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.