ಮೂಕ ಹುಲಿ ‘ಅವನಿ’ಯ ಮೇಲೆ ನರಭಕ್ಷಕ ಎಂಬ ಆರೋಪ ಹೊರಿಸಿ, ಅದಕ್ಕೆ ನೀಡಿರುವ ಶಿಕ್ಷೆ ಅಮಾನವೀಯ ಮತ್ತು ನಾಚಿಕೆಗೇಡಿನದ್ದು.
13 ಜನರನ್ನು ತಿಂದ ಹುಲಿ ಎಂಬ ಆರೋಪ ‘ಅವನಿ’ಯ ಮೇಲೆ ಹೊರಿಸಿ ಆ ಆರೋಪಕ್ಕೆ ಯಾವುದೇ ಆಧಾರಗಳಿಲ್ಲದಿದ್ದರೂ ಅದನ್ನು ಕೊಂದದ್ದು ಮನುಷ್ಯ ಎಷ್ಟು ಕ್ರೂರಿ ಎಂಬುದನ್ನು ಸಾಬೀತು ಮಾಡಿದಂತಾಗಿದೆ.
ವಿಜ್ಞಾನ, ತಂತ್ರಜ್ಞಾನ ಎಷ್ಟೆಲ್ಲ ಬೆಳೆದಿದೆ. ಹೀಗಿರುವಾಗ ಆ ಹುಲಿಯನ್ನು ಸೆರೆಹಿಡಿಯಲು ಬೇರೆ ಯಾವುದಾದರೂ ಮಾರ್ಗವನ್ನು ಅನುಸರಿಸಬೇಕು ಎಂದು ಒಮ್ಮೆಯೂ ಯಾರಿಗೂ ಅನಿಸಲಿಲ್ಲವೇಕೆ? ಈಗ, ‘ಅದರ ಮರಿಗಳ ಸಂರಕ್ಷಣೆ ಮಾಡಬೇಕು’ ಎಂದು ಕರುಣೆ ತೋರುವುದರಲ್ಲಿ ಅರ್ಥವೇನು? ಎಲ್ಲಾ ಪ್ರಾಣಿಗಳು ಸೇರಿ ಒಮ್ಮೆ ಇಡೀ ಮನುಷ್ಯ ಸಂಕುಲವನ್ನೇ ನಾಶ ಮಾಡಿದರೆ ಏನಾಗಬಹುದುದೆಂದು ಯೋಚಿಸಲು ಅಸಾಧ್ಯವೇ?
ಮನುಷ್ಯ ಉಳಿಯಬೇಕಾದರೆ ಪ್ರಾಣಿ, ಪಕ್ಷಿ, ಪರಿಸರಗಳನ್ನು ಉಳಿಸುವುದೂ ಅಗತ್ಯ. ಒಂದೊಂದು ಪ್ರಾಣಿಗೆ ಒಂದೊಂದು ದಿನ ಗೊತ್ತು ಮಾಡಿ, ದಿನಾಚರಣೆ ಮಾಡಿದರೆ ಸಾಲದು. ಅವುಗಳ ರಕ್ಷಣೆಗೆ ಪಣ ತೊಡುವುದೂ ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.