ADVERTISEMENT

ಸಾಂಪ್ರದಾಯಿಕ ಜ್ಞಾನ: ಅಭಿನಂದನೀಯ ಕಾರ್ಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 19:30 IST
Last Updated 9 ಜುಲೈ 2021, 19:30 IST

‘ಸಾಂಪ್ರದಾಯಿಕ ಜ್ಞಾನ: ಮಹತ್ವದ ದೀವಿಗೆ’ ಎಂಬ ಡಾ. ಎಚ್.ಆರ್.ಕೃಷ್ಣಮೂರ್ತಿ ಅವರ ವಿಶ್ಲೇಷಣಾ ಲೇಖನ (ಪ್ರ.ವಾ., ಜುಲೈ 5), ಸಂಶೋಧನಾ ಕ್ಷೇತ್ರದಲ್ಲಿರುವ ಪೇಟೆಂಟ್‌ ಆಸಕ್ತರಿಗೆ ಉಪಯುಕ್ತವಾಗಿದೆ. ದೇಶದಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್‌ಐಆರ್‌) ನೇತೃತ್ವದಲ್ಲಿ ಎರಡು ದಶಕಗಳ ಹಿಂದೆ ‘ಸಾಂಪ್ರದಾಯಿಕ ಜ್ಞಾನದ ಡಿಜಿಟಲ್ ಲೈಬ್ರರಿ’ಯ (ಟಿಕೆಡಿಎಲ್) ಸ್ಥಾಪನೆಗೆ ಪ್ರೇರಣೆ ನೀಡಿದ ಅಂಶಗಳು ಕುತೂಹಲಕಾರಿಯಷ್ಟೇ ಅಲ್ಲದೆ ಎಚ್ಚರಿಕೆ ನೀಡುವ ವಿಷಯಗಳಾಗಿವೆ.

ದೇಶದ ಜೈವಿಕ ಸಂಪನ್ಮೂಲ ಆಧರಿಸಿ ನಮಗೇ ಗೊತ್ತಿಲ್ಲದಂತೆ ವಿದೇಶಿ ಕಂಪನಿಗಳು ಪಡೆದಿದ್ದ 239 ಪೇಟೆಂಟ್‌ಗಳನ್ನು ರದ್ದುಪಡಿಸಿದ ಹೆಮ್ಮೆಯ ಸಿಎಸ್ಐಆರ್ ಮತ್ತು ಟಿಕೆಡಿಎಲ್ ಸಂಸ್ಥೆಗಳ ಶ್ರಮವನ್ನು ಮೆಚ್ಚಲೇಬೇಕು (ಉದಾಹರಣೆಗೆ, ನಮ್ಮ ಸಾಂಪ್ರದಾಯಿಕ ಬೆಳೆಗಳಾದ ಅರಿಸಿನ, ಬೇವು, ಬಾಸ್ಮತಿ ಇತ್ಯಾದಿಗಳಿಗೆ ವಿದೇಶಗಳಲ್ಲಿ ದೊರೆತ ಪೇಟೆಂಟ್‌ಗಳು ರದ್ದಾದದ್ದು). ಈ ಎರಡೂ ಸಂಸ್ಥೆಗಳಿಗೆ ಅಭಿನಂದನೆ.

–ಡಾ. ಆರ್.ಎ.ಪ್ರಭು, ಕುಮಟಾ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.