ಮಹಿಳಾ ಜಿಲ್ಲಾಧಿಕಾರಿಯನ್ನು ಉದ್ದೇಶಿಸಿ ‘ಮನೆಯಲ್ಲಿ ಅಡುಗೆ ಮಾಡಿಕೊಂಡಿರಲಿ’ ಎಂಬ ಹೇಳಿಕೆ, ಸಂಸತ್ ಸದಸ್ಯೆಯರ ವಿರುದ್ಧ ವೈಯಕ್ತಿಕ ವಿಷಯಗಳ ಬಗೆಗೆ ಅವಹೇಳನಕಾರಿ ನಿಂದನೆಗಳನ್ನು ಕೇಳುತ್ತಿದ್ದ ರಾಜ್ಯದ ನನ್ನಂತಹ ಅನೇಕ ಹೆಣ್ಣುಮಕ್ಕಳಿಗೆ, ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರ ಸಚಿವೆಯಾಗುವ ಅವಕಾಶ ಸಿಕ್ಕಿರುವ ವಿಷಯವು ಬಾಯಿಗೆ ಸಣ್ಣ ಬೆಲ್ಲದ ಉಂಡೆಯನ್ನು ಹಾಕಿದಂತಾಗಿದೆ.
ಈವರೆಗೆ ಮಹಿಳಾ ಮುಖ್ಯಮಂತ್ರಿಯನ್ನು ಕಾಣದ, ಮುಂದೆ ಹಲವು ವರ್ಷಗಳವರೆಗೆ ಕಾಣುವ ಯಾವುದೇ ಸೂಚನೆ ಇಲ್ಲದಿರುವಾಗ, ರಾಜಕೀಯದಲ್ಲಿ ಮಹಿಳಾ ರಾಜಕಾರಣಿಗೆ ದೊರೆತ ಈ ಅವಕಾಶವೇ ದೊಡ್ಡದೆಂದು ಆಚರಿಸಬೇಕಾಗಿದೆ. ಕರ್ನಾಟಕದಂತಹ ವಿದ್ಯಾವಂತರ ರಾಜ್ಯದಲ್ಲಿಯೂ ಮಹಿಳೆಯರು ರಾಜಕೀಯದಲ್ಲಿ ಭಾಗವಹಿಸುವ ಪ್ರಮಾಣ ಅತ್ಯಂತ ಕಡಿಮೆ ಇರುವುದು ವಿಷಾದದ ಸಂಗತಿ.
–ಸುಪ್ರೀತಾ, ತುಮಕೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.