ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಪಾತಗಳು ಯಥೇಚ್ಛವಾಗಿವೆ. ಜೊತೆಗೆ ಪ್ರಕೃತಿ ಸೌಂದರ್ಯದಲ್ಲೂ ಜಿಲ್ಲೆ ಕಡಿಮೆಯಿಲ್ಲ. ಆದರೆ ಅವುಗಳನ್ನು ಅಭಿವೃದ್ಧಿಪಡಿಸುವ ನಾಯಕರ ಕೊರತೆ ಮಾತ್ರ ಇದೆ.
ಈ ಜಿಲ್ಲೆ ಯಾಕೆ ಅಭಿವೃದ್ಧಿ ಹೊಂದಿಲ್ಲ ಎಂದು ಪ್ರಶ್ನಿಸಿದರೆ, ಇಲ್ಲಿ ತುಂಬಾ ಕಾಡು, ಕರಾವಳಿ ಇರುವಾಗ ಅಭಿವೃದ್ಧಿ ಹೇಗೆ ಸಾಧ್ಯವಾದೀತು ಎಂದು ಕೆಲವರು ಕೇಳುತ್ತಾರೆ.
ಕೇವಲ ಪ್ರವಾಸೋದ್ಯಮದಿಂದಲೇ ಸಿಂಗಪುರ ಎನ್ನುವ ಒಂದು ದೇಶ ನಡೆಯುತ್ತದೆ ಎನ್ನುವುದಾದರೆ, ಉತ್ತರ ಕನ್ನಡ ಜಿಲ್ಲೆಯನ್ನೇಕೆ ಇಲ್ಲಿನ ರಾಜಕಾರಣಿಗಳು ಅಭಿವೃದ್ಧಿಪಡಿಸುತ್ತಿಲ್ಲ. ಈ ಕ್ಷೇತ್ರದ ಎಲ್ಲಾ ನಾಯಕರು ಒಟ್ಟಾದರೆ ಜಿಲ್ಲೆಯನ್ನು ‘ಟೂರಿಸಂ ಹಬ್’ ಆಗಿ ಮಾಡಿ, ಜಗತ್ತಿನ ಗಮನ ಸೆಳೆಯಬಹುದು.
–ರಾಜೇಶ್ ದಳವಾಯಿ ಜಿಡ್ಡಿ,ಸಿದ್ಧಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.