ಸ್ವಾತಂತ್ರ್ಯ ಲಭಿಸಿ 75 ವರ್ಷ ಗತಿಸಿದರೂ ಜಾತೀಯತೆ ಅಳಿದಿಲ್ಲವೆಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ (ಪ್ರ.ವಾ., ನ. 29). ಜಾತೀಯತೆ ಅಳಿದಿಲ್ಲವಷ್ಟೇ ಅಲ್ಲ ಜಾತೀಯತೆಯಿಂದ ಉಂಟಾಗುತ್ತಿರುವ ಶ್ರೇಷ್ಠತೆಯ ಅಹಂಕಾರವು ದಮನಿತ ಜನಾಂಗಕ್ಕೆ ಮಾಡುತ್ತಿರುವ ಅವಮಾನ ನಿಜಕ್ಕೂ ಅಸಹನೀಯವಾಗಿದೆ. ಅಷ್ಟೇ ಅಲ್ಲದೆ ರಾಜಕಾರಣಿಗಳು ಕೂಡ ಜಾತಿಯ ದಳ್ಳುರಿಗೆ ತುಪ್ಪ ಸುರಿಯುತ್ತಿರುವುದು ಒಂದು ದುರಂತವೇ ಆಗಿದೆ.
ಭಕ್ತರೆಲ್ಲ ಸಮಾನರು ಎಂದೇ ಬೋಧಿಸಬೇಕಿದ್ದ ಧಾರ್ಮಿಕ ಸಂಸ್ಥೆಗಳು ಕೂಡ ಜಾತೀಯತೆಗೆ ನೀರೆರೆಯುತ್ತಿರು ವುದನ್ನು ನೋಡಿದರೆ ನಾವು ಯಾವ ದಿಕ್ಕಿನತ್ತ ಹೊರಟಿದ್ದೇವೆಂದು ಬೇಸರವಾಗುತ್ತಿದೆ. ಈ ಎಲ್ಲದರ ಮೊತ್ತ ನಮ್ಮ ಶ್ರೇಷ್ಠ ಸಂವಿಧಾನವನ್ನು ಬದಿಗೆ ಸರಿಸುವುದೇ ಆಗಿದೆ. ಈ ಕುರಿತು ನಮ್ಮ ನ್ಯಾಯಪೀಠಗಳಾದರೂ ಎಚ್ಚರಿಕೆ ನೀಡುತ್ತಿ ರುವುದು ಒಂದು ಆಶಾದಾಯಕ ಬೆಳವಣಿಗೆ.
-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.