ADVERTISEMENT

ವಿವಿಪ್ಯಾಟ್‌ ಎಣಿಕೆ: ಮನವಿಗೆ ಸಕಾಲ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 19:29 IST
Last Updated 16 ಆಗಸ್ಟ್ 2019, 19:29 IST

ಲೋಕಸಭಾ ಚುನಾವಣೆಯ ವೇಳೆ ವಿರೋಧ ಪಕ್ಷಗಳೆಲ್ಲಾ ಕೂಡಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿ, ಇವಿಎಂ ತಿರುಚುವ ಸಾಧ್ಯತೆ ಇರುವುದರಿಂದ ಶೇ 50ರಷ್ಟು ವಿ‌ವಿಪ್ಯಾಟ್ ಮತಚೀಟಿ ಎಣಿಕೆಗೆ ವ್ಯವಸ್ಥೆ ಮಾಡಬೇಕು ಎಂದು ಕೇಳಿಕೊಂಡಿದ್ದವು. ವಿ‌ವಿಪ್ಯಾಟ್ ಮತಪತ್ರ ಎಣಿಸಲು ಬಹಳಷ್ಟು ಸಮಯ ಬೇಕಾಗುತ್ತದೆ, ಆದರೆ ಈಗಾಗಲೇ ಚುನಾವಣಾ ವೇಳಾಪಟ್ಟಿ ಘೋಷಣೆ ಆಗಿರುವುದರಿಂದ ವೇಳಾಪಟ್ಟಿಯ ಅವಧಿಯೊಳಗೆ ಶೇ 50ರಷ್ಟು ವಿ‌ವಿಪ್ಯಾಟ್ ಎಣಿಸುವುದು ಅಸಾಧ್ಯ ಎಂದು ಆಯೋಗವು ಕೋರ್ಟ್‌ಗೆ ತಿಳಿಸಿತ್ತು.

ಇನ್ನು ಕೆಲವು ದಿನಗಳಲ್ಲಿ ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಘೋಷಣೆಯಾಗಲಿವೆ. ಹಾಗಾಗಿ, ಈ ರಾಜ್ಯಗಳ ಚುನಾವಣೆಗಳಲ್ಲಿ ವಿ‌ವಿಪ್ಯಾಟ್‌ನ ಶೇ 100ರಷ್ಟು ಮತಚೀಟಿಗಳನ್ನು ಎಣಿಸಲು ಆಯೋಗಕ್ಕೆ ಆದೇಶಿಸಬೇಕೆಂದು ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್‌ಗೆ ಈಗಲೇ ಮನವಿ ಸಲ್ಲಿಸಬೇಕು. ತಡವಾದರೆ ಆಯೋಗವು ಮತ್ತೆ ಸಮಯದ ಕಾರಣವನ್ನು ಮುಂದೊಡ್ಡುತ್ತದೆ.

ಅನಿಲ್ ಪೂಜಾರಿ, ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.