ಈ ಬಾರಿ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆಗಳು ನಡೆಯದಿರುವುದು ಬೇಸರದ ವಿಚಾರ.
ಅಧಿವೇಶನಕ್ಕೆ ಬಂದಿದ್ದ ಹೆಚ್ಚಿನ ಶಾಸಕರಿಗೆ ತಮ್ಮ ಕುರ್ಚಿಗಳೇ ಮುಖ್ಯವಾದವು. ರೈತರ ಸಾಲ ಮನ್ನಾದ ಕುರಿತಾಗಲೀ, ಕಬ್ಬು ಬೆಳೆಗಾರರಿಗೆ ಬರಬೇಕಾದ ಹಣವನ್ನು ಕೊಡಿಸುವ ವಿಚಾರದಲ್ಲಾಗಲೀ ಚರ್ಚೆ ನಡೆಸಲಿಲ್ಲ. ಸುವರ್ಣಸೌಧದಲ್ಲಿ ರಾಜಕೀಯ ಮೇಲಾಟ ನಡೆಸಲು ಇಷ್ಟೊಂದು ಖರ್ಚು ಮಾಡುವ ಅಗತ್ಯ ಇತ್ತೇ?
ಸಚಿವರಲ್ಲೂ ಹೆಚ್ಚಿನವರು ತಮ್ಮ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಳ್ಳುವ, ಆ ಕುರಿತು ಮಾತ್ರ ಚರ್ಚಿಸುವಲ್ಲಿಗೆ ಸೀಮಿತರಾದರು. ಒಟ್ಟಾರೆ ಜನಪರ ಕಾರ್ಯಗಳ ಬಗ್ಗೆ ಚರ್ಚೆಗಳು ನಡೆಯದಿರುವುದು ವಿಪರ್ಯಾಸವೇ ಸರಿ.
–ಲಿಂಗರಾಜ ತಳ್ಳಿಹಾಳ, ರೋಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.