ADVERTISEMENT

ಜಲಮೂಲ ಕಾಪಾಡುವ ಹೊಣೆ ಎಲ್ಲರದು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 20:00 IST
Last Updated 22 ನವೆಂಬರ್ 2020, 20:00 IST

ರಾಜ್ಯವು ತಂತ್ರಜ್ಞಾನದಲ್ಲಿ ಮುಂದೆ ಇದ್ದರೂ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗದ ದಯನೀಯ ಸ್ಥಿತಿ ಇರುವುದು (ಪ್ರ.ವಾ., ನ. 22) ಆತಂಕಕಾರಿ. ಆಧುನಿಕತೆಯ ಭರಾಟೆಯಲ್ಲಿ ಅಧಿಕಾರಿಗಳು ಹಳ್ಳಿಗಳಲ್ಲಿದ್ದ ಜಲಮೂಲಗಳಿಗೆ ಅಭಿವೃದ್ಧಿ ಎನ್ನುವ ಹಣೆಪಟ್ಟಿ ಕಟ್ಟಿ ಕಾಂಕ್ರೀಟ್ ಮೂಲಗಳನ್ನಾಗಿಸಿದ್ದಾರೆ. ಬಿದ್ದ ಮಳೆ ನೀರನ್ನು ಇಂಗಿಸುವ ಸಲುವಾಗಿ ‘ಮನರೇಗಾ’ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಮಾರ್ಪಡಬೇಕಿದ್ದ ಲಕ್ಷಾಂತರ ಇಂಗುಗುಂಡಿಗಳು ಮಧ್ಯವರ್ತಿಗಳ ಸ್ವಾರ್ಥಕ್ಕೆ ಸಿಲುಕಿ ಬಿಲ್ ಪಾವತಿಗಷ್ಟೇ ಸೀಮಿತವಾಗಿ ಬಿಲ್ ಗುಂಡಿಗಳಾಗಿರುವುದು ದುರದೃಷ್ಟಕರ. ಹೀಗಿರುವಾಗ ಶುದ್ಧ ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ವಿಜ್ಞಾನಿಗಳು ಮತ್ತು ರಾಜಕಾರಣಿಗಳನ್ನು ದೂರಿ ಪ್ರಯೋಜನವಿಲ್ಲ.

ಮಳೆ ನೀರನ್ನು ಇಂಗಿಸಿ ಅಂತರ್ಜಲವನ್ನು ವೃದ್ಧಿಸಲು, ಅಳಿದುಳಿದಿರುವ ನೀರಿನ ಮೂಲಗಳನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತು, ಉಳಿದಿರುವ ಕೆರೆಕಟ್ಟೆ, ಬಾವಿಗಳ ಪುನಶ್ಚೇತನಕ್ಕಾಗಿ ಸೂಕ್ತ ಯೋಜನೆಗಳನ್ನು ರೂಪಿಸಬೇಕಿದೆ. ಜೊತೆಗೆ ಹಲವು ಪೀಳಿಗೆಗಳ ಉಳಿವಿಗಾಗಿ ಪ್ರತಿಯೊಬ್ಬರೂ ಜಲಮೂಲಗಳ ರಕ್ಷಣೆಗೆ ಪಣ ತೊಡಬೇಕಿದೆ.

-ಮಾರುತೇಶ್ ಪುಲಮಘಟ್ಟ, ಮಧುಗಿರಿ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.