ಲಾಕ್‌ಡೌನ್ ಹಿನ್ನೆಲೆಯಲ್ಲಿ ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ ನೀಡಲಿರುವ ₹ 5,000 ಪರಿಹಾರಧನ ಪಡೆಯಲು ಕೇವಲ ಸ್ವಂತ ಆಟೊ ಮತ್ತು ಟ್ಯಾಕ್ಸಿ ಹೊಂದಿದವರಿಗೆ ಮಾತ್ರ ಅವಕಾಶವಿದೆ. ಬಾಡಿಗೆ ಆಧಾರದ ಮೇಲೆ ಈ ವಾಹನಗಳನ್ನು ಓಡಿಸುವ ಚಾಲಕರಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ರಿಯಾಯಿತಿ ಮತ್ತು ಅವಕಾಶಗಳನ್ನು ನೀಡಿಲ್ಲ. ಎರಡು ತಿಂಗಳಿನಿಂದ ಉದ್ಯೋಗವಿಲ್ಲದೆ ಕಂಗೆಟ್ಟಿರುವ ಚಾಲಕರು ಕೈಯಲ್ಲಿ ಕಾಸಿಲ್ಲದೆ ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಆಟೊ ಮತ್ತು ಟ್ಯಾಕ್ಸಿ ಚಾಲಕರು ಬಾಡಿಗೆ ವಾಹನ ಪಡೆದು ಹೇಗೋ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಸಾರಿಗೆ ಸಚಿವರು ಇತ್ತ ಗಮನಹರಿಸಿ, ವಾಹನ ಮಾಲೀಕರು ಹಾಗೂ ಬಾಡಿಗೆ ಚಾಲಕರು ಇಬ್ಬರಿಗೂ ನ್ಯಾಯಸಮ್ಮತವಾಗಿ ಪರಿಹಾರ ದೊರಕಿಸಿ ಕೊಡಬೇಕು.
ಮುರುಗೇಶ ಡಿ., ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.