ADVERTISEMENT

ಗಾಂಧಿ ಮೇಲಿನ ಪ್ರೀತಿ ಅಲ್ಲಗಳೆಯಲಾಗದು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 19:45 IST
Last Updated 8 ಅಕ್ಟೋಬರ್ 2019, 19:45 IST

‘ಕೆಲವರು ದೇಶಪ್ರೇಮದ ಹೆಸರಿನಲ್ಲಿ ಹೊಸ ಪೀಳಿಗೆಯ ಮಿದುಳಲ್ಲಿ ಗಾಂಧಿ ದ್ವೇಷ ತುಂಬುತ್ತಿದ್ದಾರೆ’ ಎಂದು ನಾರಾಯಣ ಎ. ಅವರು ತಮ್ಮ ಲೇಖನದಲ್ಲಿ ಹೇಳಿರುವುದು (ಪ್ರ.ವಾ., ಅ. 2) ಕಟು ವಾಸ್ತವ. ಆದರೂ ಅವರು, ಸಣ್ಣ ಸಂಖ್ಯೆಯ ಮಂದಿಯನ್ನು ಹೊರತುಪಡಿಸಿದರೆ ಗಾಂಧಿಯವರನ್ನು ಭಾರತೀಯರು ಎಂದೂ ಪ್ರೀತಿಸಲೂ ಇಲ್ಲ, ಗೌರವಿಸಲೂ ಇಲ್ಲ ಎಂದಿರುವುದು ಉತ್ಪ್ರೇಕ್ಷೆ ಎನಿಸುತ್ತದೆ. ಹಳೆ ತಲೆಮಾರಿನ, ಅದರಲ್ಲೂ ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧಿ ಬೆನ್ನಿಗೆ ನಿಂತ ಬಹುಮಂದಿ ಅವರ ಮೇಲಿನ ಪ್ರೀತಿ, ಗೌರವದಿಂದ ತ್ಯಾಗ, ಬಲಿದಾನ ಮಾಡಿದ್ದನ್ನು ಅಲ್ಲಗಳೆಯುವುದು ವಾಸ್ತವಕ್ಕೆ ದೂರವಾದುದು.

ಗಾಂಧೀಜಿ ಉಪ್ಪು, ಚರಕ, ಖಾದಿಯಂಥ ಅತಿ ಸಾಮಾನ್ಯ ವಸ್ತು ವಿಷಯಗಳ ಮುಖಾಂತರ ಜನಮನ ಸೆಳೆದುದು, ಸ್ವಾತಂತ್ರ್ಯದ ಜೊತೆಗೆ ಸಂಯಮ, ಸ್ವಯಂಶಿಸ್ತಿನ ಮೂಲಕ ವ್ಯಕ್ತಿ ಸಬಲೀಕರಣಕ್ಕೆ ಒತ್ತು ನೀಡಿದ್ದನ್ನು ಮನಸಾರೆ ಒಪ್ಪಿ ಹಿಂಬಾಲಿಸಿದುದರಿಂದ, ಜನಾಂದೋಲನಗಳು ಯಶಸ್ವಿಯಾದವು ಮತ್ತು ಅವು ಸ್ವಾತಂತ್ರ್ಯ ಚಳವಳಿಯ ಬೃಹತ್ ರೂಪ ಪಡೆದವು ಎನ್ನುವುದು ಅಳಿಸಲಾಗದ ಸತ್ಯವಲ್ಲವೇ?

-ಎಂ.ಎಸ್.ರಮೇಶ್,ಪಡೀಲು, ಪುತ್ತೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.