ADVERTISEMENT

ಅಂತರ್ಜಲ ಹೆಚ್ಚಿಸಿ

ಎ.ಟಿ.ರಾಮಸ್ವಾಮಿ
Published 14 ಜೂನ್ 2013, 19:59 IST
Last Updated 14 ಜೂನ್ 2013, 19:59 IST
ಎ.ಟಿ. ರಾಮಸ್ವಾಮಿ, ಮಾಜಿ ಶಾಸಕ
ಎ.ಟಿ. ರಾಮಸ್ವಾಮಿ, ಮಾಜಿ ಶಾಸಕ   

ಹೆಚ್ಚು ಹಣ ವೆಚ್ಚ ಮಾಡುವುದರಿಂದ ನೀರಾವರಿ ಸೌಲಭ್ಯ ಉತ್ತಮವಾಗುತ್ತದೆ ಎಂಬ ಕಲ್ಪನೆಯೇ ಸರಿಯಲ್ಲ. ಇದರಿಂದ ಆರ್ಥಿಕ ಗುರಿ ತಲುಪಬಹುದೇ ಹೊರತು ಗುಣಮಟ್ಟದ ಕೆಲಸ ಮಾಡಲು ಸಾಧ್ಯವಿಲ್ಲ.

ನೀರಾವರಿ ಒದಗಿಸಲು ಎಷ್ಟೆಲ್ಲ ಯೋಜನೆಗಳಿದ್ದರೂ ಈಗಲೂ ನಮ್ಮ ಎಲ್ಲ ಕಾಲುವೆಗಳಲ್ಲಿ ನೀರು ಹರಿಯುತ್ತಿಲ್ಲ. ಅಚ್ಚುಕಟ್ಟು ಪ್ರದೇಶದ ಕೆರೆಗಳು ಸುಸ್ಥಿತಿಯಲ್ಲಿಲ್ಲ. ಕೆರೆಗಳ ತೂಬುಗಳು ಕೆಟ್ಟು ಹಲವು ದಶಕಗಳಾಗಿವೆ. ಬಿದ್ದ ಮಳೆಯ ನೀರು ಪೋಲಾಗುತ್ತಿದೆ. ದೊಡ್ಡ ಅಣೆಕಟ್ಟೆಗಳನ್ನು ನಿರ್ಮಿಸಿ ಕಾಲುವೆ ಮೂಲಕ ನೀರು ಕೊಡುವುದು ಮಾತ್ರ ನೀರಾವರಿ ಇಲಾಖೆಯ ಕೆಲಸವಲ್ಲ. ಅಂತರ್ಜಲ ಮಟ್ಟ ಹೆಚ್ಚಿಸುವ ಯೋಜನೆರೂಪಿಸಬೇಕು. ಮಳೆ ನೀರು ಸಂಗ್ರಹಕ್ಕೆ ಸರ್ಕಾರ ಯೋಜನೆ ರೂಪಿಸಿದ್ದರೂ ಅನುಷ್ಠಾನದಲ್ಲಿ ದೋಷಗಳಿವೆ.

ಅಣೆಕಟ್ಟೆ ಬದಲು ಅಲ್ಲಲ್ಲಿ ಚೆಕ್‌ಡ್ಯಾಂ, ಬ್ಯಾರೇಜ್‌ಗಳನ್ನು ನಿರ್ಮಿಸಿ ಮಳೆ ನೀರನ್ನು ಅಲ್ಲಲ್ಲಿ ನಿಲ್ಲಿಸುವ ಕೆಲಸ ಆಗಬೇಕು. ನಮ್ಮ ರೈತರು ಹೆಚ್ಚಾಗಿ ಕೊಳವೆ ಬಾವಿಗಳನ್ನೇ ಅವಲಂಬಿಸಿದ್ದಾರೆ. ಅಂತರ್ಜಲ ಮಟ್ಟ ಹೆಚ್ಚಿಸಲು ಸರಿಯಾದ ಯೋಜನೆ ರೂಪಿಸದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ಸಮಸ್ಯೆ ಎದುರಿಸಬೇಕಾಗಬಹುದು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.