ADVERTISEMENT

`ಅರಿವಿನ ವಿಸ್ತಾರಕ್ಕೆ ಸಮ್ಮೇಳನ ವೇದಿಕೆ'

ಪ್ರೊ.ಎ.ವಿ.ನಾವಡ
Published 25 ಜನವರಿ 2013, 19:59 IST
Last Updated 25 ಜನವರಿ 2013, 19:59 IST
`ಅರಿವಿನ ವಿಸ್ತಾರಕ್ಕೆ ಸಮ್ಮೇಳನ ವೇದಿಕೆ'
`ಅರಿವಿನ ವಿಸ್ತಾರಕ್ಕೆ ಸಮ್ಮೇಳನ ವೇದಿಕೆ'   

`ಅರಿವಂ ಪೊಸಯಿಸುವುದೆ ಧರ್ಮ, ಅದರ ತಡೆವುದೆ ಅಧರ್ಮಂ'- ಪಂಪ ಆಡಿದ ಈ ಮಾತು ಸಾಹಿತ್ಯ ಧರ್ಮವೂ ಹೌದು. ಇದನ್ನು ಸಾಹಿತ್ಯ ಸಮ್ಮೇಳನಗಳಿಗೆ ಅನುಸಂಧಾನಗೊಳಿಸಬೇಕಾಗಿದೆ.

ಎಂದೋ ಕಂಡ ಸ್ಥಾಪಿತ `ಸತ್ಯ'ಗಳಿಗೆ ಅಂಟಿಕೊಳ್ಳದೆ ಅರಿವನ್ನು ನಿತ್ಯ ಕಸಿಮಾಡಿ ಹೊಸತನ್ನು ಹೊಸೆಯಬೇಕಾಗಿದೆ. ಈ ಪ್ರಕ್ರಿಯೆಗೆ, ಅರಿವಿನ ವಿಸ್ತಾರಕ್ಕೆ ಸಾಹಿತ್ಯ ಸಮ್ಮೇಳನಗಳು ವೇದಿಕೆಯಾಗಬೇಕು.

ಈಗ ನಡೆಯುತ್ತಿರುವ `ಜಾತ್ರೆ'ಯ ಸ್ವರೂಪದ ಸಾಹಿತ್ಯ ಸಮ್ಮೇಳನಗಳಿಂದ ಬಹುದೊಡ್ಡ ಸಾಹಿತ್ಯಕ, ವೈಚಾರಿಕ ಆಕೃತಿಗಳನ್ನು ಕಟ್ಟುವುದು ಸಾಧ್ಯವಾಗದು. ಇಷ್ಟಾಗಿಯೂ ಪುಸ್ತಕ ಪ್ರಪಂಚದ ಆಚೆಗೆ ಕನ್ನಡ ಕಟ್ಟುವ, ಕನ್ನಡ ಮನಸ್ಸುಗಳನ್ನು ಕಟ್ಟುವ, ಅವನ್ನು ಒತ್ತಟ್ಟಿಗೆ ಸೇರಿಸುವ ಮಟ್ಟಿಗೆ ಇಂತಹ ಸಮ್ಮೇಳನಗಳನ್ನು ಇತ್ಯಾತ್ಮಕವಾಗಿ ಸ್ವೀಕರಿಸಬಹುದು.

ಸೃಜನಾತ್ಮಕ ಬರವಣಿಗೆಗೆ ಕೋರ್ಸ್- ಈ ಸಲಹೆಗೆ ನನ್ನ ಸಹದನಿಯಿದೆ. ಸಾಹಿತ್ಯದ ಮೌಲ್ಯ ಮತ್ತು ಗುಣಮಟ್ಟದ ದೃಷ್ಟಿಯಿಂದ ಈ ಬಗೆಯ ತರಬೇತಿ ಆಗಬೇಕಾದುದು ಅಪೇಕ್ಷಿತ. ಸಾಹಿತ್ಯ ಸಮ್ಮೇಳನಗಳು ನಡೆಯುವ ಕಿರು ಅವಧಿಯಲ್ಲಿ ತರಬೇತಿ ನೀಡುವುದು ಪರಿಣಾಮಕಾರಿಯಾಗದು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT