ADVERTISEMENT

`ಹೊಸ ಆಯಾಮ ನೀಡಲಿದೆ'

ಡಾ.ಎಂ.ಎಂ.ಕಲಬುರ್ಗಿ
Published 25 ಜನವರಿ 2013, 19:59 IST
Last Updated 25 ಜನವರಿ 2013, 19:59 IST
`ಹೊಸ ಆಯಾಮ ನೀಡಲಿದೆ'
`ಹೊಸ ಆಯಾಮ ನೀಡಲಿದೆ'   

ಸಾಹಿತ್ಯ ಉತ್ಸವಗಳಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡವರು ಭಾಗವಹಿಸುವುದರಿಂದ ಅವರು ಹೊಸ ದಾರಿ ತೋರಿಸಲಿದ್ದಾರೆ. ಇದರಿಂದ ಗಂಭೀರ ಚಿಂತನೆ ಸಾಧ್ಯವಾಗುತ್ತದೆ. ಇದು ನಿಜವಾಗಿಯೂ ಹೊಸ ಆಯಾಮ ನೀಡಲಿದೆ. ಇನ್ನೂ ಹಲವು ಆಯಾಮಗಳು ಉಳಿಯುತ್ತವೆ. ಅದನ್ನು ಬೇರೆ ಆಸಕ್ತ ಸಂಘಟಕರು ಮಾಡಲಿ.

ಸರ್ಕಾರ, ಪ್ರಕಾಶನ ಸಂಸ್ಥೆಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಂದ ಸಾಹಿತ್ಯ ಉತ್ಸವಗಳಿಗೆ ಪ್ರಾಯೋಜಕತ್ವ ಪಡೆಯುವುದು ತಪ್ಪೇನಿಲ್ಲ. ಬಸವಣ್ಣನವರ `ಆವನೇವನಾದರೇನು ಹೇಮವಿಲ್ಲದಂಗೈಸಬಹುದೇ'? (ಯಾರಾದರೇನು ಹಣವಿಲ್ಲದಿದ್ದರೆ ಏನು ಮಾಡಲಾಗುತ್ತದೆ?) ವಚನದಂತಾಗುತ್ತದೆ. ಆದರೆ ಹಣ ಪಡೆದುಕೊಳ್ಳುವ ಸಂಘಟಕರು ಪ್ರಾಮಾಣಿಕರಾಗಬೇಕು. ಖರ್ಚಾದ ಹಾಗೂ ಉಳಿದ ಹಣದ ಲೆಕ್ಕವನ್ನು ಪಾರದರ್ಶಕವಾಗಿ ಪ್ರಕಟಿಸಬೇಕು.

ಸಾಹಿತ್ಯ ಕಾರ್ಯಕ್ರಮಗಳಲ್ಲಿ ನಡೆಯುವ ವಿಚಾರ ವಿನಿಮಯದಿಂದ ಖಂಡಿತ ಹೊಸ ಹೊಳಹುಗಳು ಕುಡಿಯೊಡೆಯುತ್ತವೆ.
ಭಾರತದಲ್ಲಿ ಸೃಜನಾತ್ಮಕ ಬರವಣಿಗೆಗೆ ಸಂಬಂಧಿಸಿದ ಕೋರ್ಸ್‌ಗಳಿಲ್ಲ. ನಾನು ಕರ್ನಾಟಕ ವಿ.ವಿ.ಯ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥನಾಗಿದ್ದ ಸಂದರ್ಭದಲ್ಲಿ ಇಂತಹ ಕೋರ್ಸ್ ಆರಂಭಕ್ಕೆ ಯತ್ನಿಸಿದ್ದೆ.

ಕಾದಂಬರಿ, ಕವಿತೆ, ನಾಟಕಗಳಲ್ಲಿ ಆಸಕ್ತಿ ಇರುವ ಹುಡುಗ-ಹುಡುಗಿಯರನ್ನು ಗುರುತಿಸಿ ಅವರಿಗೆ ಆ ಬಗ್ಗೆ ಬರೆದುಕೊಂಡು ಬರಲು ಹೇಳಬೇಕು. ತಪ್ಪಿದ್ದಲ್ಲಿ ತಿದ್ದಬೇಕು. ಇದು ಸಾಂಪ್ರದಾಯಿಕ ಪಾಠ ಮಾಡುವ ಕ್ರಮಕ್ಕಿಂತ ಭಿನ್ನವಾಗಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT