ನವದೆಹಲಿ: ಸಲಿಂಗ ವಿವಾಹ ಮಾಡಿಕೊಂಡ ವ್ಯಕ್ತಿ ತನ್ನ ವಿದೇಶಿ ಸಂಗಾತಿಗೆ ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಕುರಿತ ಅರ್ಜಿಯೊಂದರ ಬಗ್ಗೆ ದೆಹಲಿ ಹೈಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರ ಮತ್ತು ನ್ಯೂಯಾರ್ಕ್‌ನ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾಗೆ ವಿವರಣೆ ಕೇಳಿ ನೋಟಿಸ್ ನೀಡಿದೆ.
ಭಾರತದ ಪೌರತ್ವ ಹೊಂದಿರುವ ಅನಿವಾಸಿ ಭಾರತೀಯ ವ್ಯಕ್ತಿ, ಸಲಿಂಗ ವಿವಾಹವಾದ ಬಳಿಕ ಸಂಗಾತಿಗೂ ಕೂಡ ದೇಶದ ಪೌರತ್ವ ಪಡೆಯಲು ಬಯಸಿದ್ದು, ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ.
ಆದರೆ ಸಲಿಂಗಿ ದಂಪತಿಯ ವಿವಾಹ ಊರ್ಜಿತಗೊಳಿಸುವುದು ಮತ್ತು ಅನಿವಾಸಿ ಭಾರತೀಯ ಪೌರತ್ವ ನೀಡಿಕೆ ಕುರಿತು ಹೈಕೋರ್ಟ್ ವಿವರಣೆ ಬಯಸಿದೆ.
ಸಂವಿಧಾನದ 14, 15, 19 ಮತ್ತು 21ನೇ ವಿಧಿಯ ಪ್ರಕಾರ ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.
ಮುಖ್ಯ ನ್ಯಾಯಾಧೀಶರಾದ ಡಿ. ಎನ್. ಪಟೇಲ್ ಮತ್ತು ನ್ಯಾಯಾಧೀಶರಾದ ಜ್ಯೋತಿ ಸಿಂಗ್ ಅವರಿದ್ದ ಪೀಠ ಈ ಅರ್ಜಿಯ ವಿಚಾರಣೆಯನ್ನು ಆ. 27ಕ್ಕೆ ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.