‘ನನಗೀಗ ಇಪ್ಪತ್ತೆರಡು. ಮದುವೆಯಾಗಲು 32 ಸರಿಯಾದ ಸಮಯ. 32ಕ್ಕೆ ಶಾದಿ ಕಾ ಪಲಾವ್ ತಿಂತೀನಿ. ಈಗಲೇ ಶಾದಿ ಕಾ ಲಡ್ಡೂ ಬೇಡ’ ಎಂದು ಆಲಿಯಾ ಭಟ್ ಹೇಳಿದ್ದಾರೆ.
ತಾನು ಮದುವೆಯಾಗಬಯಸುವ ಹುಡುಗನಿಗೆ ಹಾಸ್ಯ ಪ್ರಜ್ಞೆ ಇರಬೇಕು. ತನಗೆ ಯಾವಾಗಲೂ ನಗಿಸುತ್ತಲಿರಬೇಕು. ನಗಿಸುವುದನ್ನು ಹೊರತು ಪಡಿಸಿದರೆ ನೋಡಲು ಸುಂದರನಾಗಿರಬೇಕು. ಮುದ್ದಾಗಿರಬೇಕು ಎಂಬ ಮೂರು ಗುಣಗಳನ್ನು ಹೇಳಿದ್ದಾಳೆ ಆಲಿಯಾ. ತನ್ನ ಮೊದ್ದುತನದ ಪೆದ್ದು ಜೋಕುಗಳಿಂದಾಗಿ ಹೆಸರಾಗಿರುವ ಆಲಿಯಾ ಈಚೆಗೆ ಮುಂಬೈನಲ್ಲಿ ‘ಮುಂಬರಲಿರುವ ಚಿತ್ರ ನೋಡಿ...
ಶಾನ್‌ದಾರ್‌ನಲ್ಲಿ ನಾನು ಜಾಣೆಯಾಗಿರುವೆ. ಅಲ್ಲಿಯ ನನ್ನ ಪಾತ್ರಕ್ಕೂ, ನನ್ನ ಜೀವನಕ್ಕೂ ನೇರ ಸಂಬಂಧವಿದೆ. ಈ ಆಲಿಯಾಗೂ ಅಲ್ಲಿರುವ ಆಲಿಯಾಗೂ ನಡುವೆ ಯಾವುದೇ ಅಂತರವಿಲ್ಲ. ಏನೇ ಪ್ರಶ್ನೆ ಕೇಳಿದರೂ ಥಟ್ ಅಂತ ಉತ್ತರ ಸಿದ್ಧವಿರುತ್ತದೆ’ ಎಂದಿದ್ದಾರೆ.
ಆದರೆ ಟಿವಿ ರಿಯಾಲಿಟಿ ಶೋ ಒಂದರಲ್ಲಿ ನಮ್ಮ ರಾಷ್ಟ್ರಪತಿ ಯಾರು ಎಂದು ಕೇಳಿದಾಗ ಪೃಥ್ವಿರಾಜ್ ಚೌಹಾಣ್ ಎಂದು ಹೇಳಿದ್ದರು. ಇನ್ನೊಂದು ಶೋನಲ್ಲಿ ವರುಣ್ ಧವನ್‌ಗೆ ತಾವು ದಿನಾಲೂ ಮಸಾಜ್ ಮಾಡುವುದಾಗಿಯೂ... ಮುಖದ ಮಸಾಜ್ ಮಾಡುವುದಾಗಿಯೂ ಹೇಳಿದ್ದರು. ಇಂಥ ಹೇಳಿಕೆಗಳಿಂದಲೇ ಜೋಕುಗಳ ರಾಣಿಯಾದ ಖ್ಯಾತಿ ಆಲಿಯಾದ್ದು.
ಅವರ ಅಪ್ಪ ಮಹೇಶ್ ಭಟ್ ಚಿತ್ರದಲ್ಲಿ ಪಾತ್ರ ನಿರ್ವಹಿಸುವುದಾದರೆ ಸಂಭಾವನೆ ತೆಗೆದುಕೊಳ್ಳುವರೆ ಎಂಬ ಪ್ರಶ್ನೆಗೂ ಆಲಿಯಾ ವಿಚಿತ್ರವಾಗಿ ಉತ್ತರಿಸಿದ್ದರು. ‘ನಾನು ಸಣ್ಣವಳಿದ್ದಾಗ ಆಗಾಗ ಅಪ್ಪನ ಕಾಲೊತ್ತಿದ್ದೆ. ಪ್ರತಿ ಕಾಲು ಒತ್ತಿದಾಗಲೂ ನಮ್ಮಪ್ಪ ನಂಗೆ ಐನೂರು ರೂಪಾಯಿಯ ನೋಟು ಕೊಡುತ್ತಿದ್ದರು. ಅದನ್ನೆಲ್ಲ ಲೆಕ್ಕ ಹಾಕಿದರೆ ಈಗಾಗಲೇ ಅರ್ಧ ಸಂಭಾವನೆ ಸಂದಾಯವಾಗಿದೆ’ ಎಂದಿದ್ದ ಈ ಜಾಣೆ, ಹೈವೆ ಚಿತ್ರದ ಅಭಿನಯಕ್ಕಾಗಿ ವಿಮರ್ಶಕರ ಗಮನ ಸೆಳೆದಿದ್ದರು.
ಹಾಡನ್ನೂ ಹೇಳುವ ಕೆಲವೇ ನಟಿಯರಲ್ಲಿ ಒಬ್ಬರಾಗಿರುವ ಆಲಿಯಾ ತಾವು ಹಾಡಿದ ಹಂಪ್ಟಿ ಶರ್ಮಾ ಕಿ ದುಲ್ಹನಿಯಾ ಚಿತ್ರದ ‘ಮೈ ತೆನು ಸಮಝಾವಾ... ಕಿ’ ಹಾಡನ್ನು ತಮ್ಮ ಅಪ್ಪನಿಗೆ ಅರ್ಪಿಸುವುದಾಗಿ ಹೇಳಿದ್ದರು. ಹೈವೆ ಚಿತ್ರದ ‘ಅಲಿ, ಅಲಿ’ ಹಾಡು ತಮಗೆ ತುಂಬಾ ಇಷ್ಟವಾಗಿದೆಯೆಂದೂ ಹೇಳಿದ್ದರು.
‘ಇಂಗ್ಲಿಷ್ ವಿಂಗ್ಲಿಷ್’ ಚಿತ್ರದ ನಿರ್ದೇಶಕಿ ಗೌರಿ ಶಿಂದೆಯ ಮುಂದಿನ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ನಟಿಸುವ ಉತ್ಸಾಹದಲ್ಲಿದ್ದಾರೆ ಆಲಿಯಾ. ಕರಣ್‌ಜೋಹರ್ ಧರ್ಮಾ, ರೆಡ್ ಚಿಲ್ಲಿ ಹಾಗೂ ಹೋಪ್ ಪ್ರೊಡಕ್ಷನ್‌ನಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಕರಣ್ ಜೋಹರ್ ಈ ಬಗ್ಗೆ ಟ್ವೀಟಿಸಿದ್ದಾರೆ.
ಆಲಿಯಾ ಭಟ್ ತಮಗಿಂತ ಬರೋಬ್ಬರಿ 27 ವರ್ಷ ದೊಡ್ಡವರಾಗಿರುವ ಶಾರುಖ್ ಜೊತೆಗೆ ನಟಿಸಲು ಉತ್ಸುಕರಾಗಿರುವುದಾಗಿ ಹೇಳಿದ್ದಾರೆ. ನವೆಂಬರ್ ಹೊತ್ತಿಗೆ ಶೂಟಿಂಗ್ ಆರಂಭವಾಗಬಹುದು. ಆ ದಿನಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.