ಹೈದರಾಬಾದ್: ಇಲ್ಲಿನ ಖಾಸಗಿ ರೆಸಾರ್ಟ್‌ನಲ್ಲಿ ಸಲಿಂಗ ಮದುವೆ ( ಗಂಡು-ಗಂಡು, ಹೆಣ್ಣು-ಹೆಣ್ಣು ಇಬ್ಬರೂ ಪರಸ್ಪರ ಮದುವೆ) ನೆರವೇರಿದೆ.
ಪುರುಷ ಸಲಿಂಗ ಜೋಡಿಗಳಾದ ಸುಪ್ರಿಯೋ ಚಕ್ರವರ್ತಿ(31) ಮತ್ತು ಅಭಯ್ ಡಾಂಗ್(34) ಅವರು ಮದುವೆಯಾಗಿದ್ದಾರೆ. ಸುಪ್ರಿಯೊಪಶ್ಚಿಮಬಂಗಾಳದವರಾಗಿದ್ದು, ಅಭಯ್ ಪಂಜಾಬ್ ಮೂಲದವರು.
ಶನಿವಾರ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಇವರಿಬ್ಬರುಉಂಗುರವನ್ನು ಬದಲಿಸಿಕೊಂಡಿದ್ದಾರೆ. ಅಭಯ್ ಮತ್ತು ಸುಪ್ರಿಯೊಕಳೆದ 8 ವರ್ಷಗಳಿಂದ ಲಿವಿಂಗ್‌ಟುಗೆದರ್‌ನಲ್ಲಿ ಇದ್ದರು ಎಂದು ಅವರ ಸ್ನೇಹಿತರು ಹೇಳಿದ್ದಾರೆ.
ಈ ಮದುವೆ ಕಾರ್ಯಕ್ರಮಕ್ಕೆ ಸಲಿಂಗ ಜೋಡಿಗಳ ಆಪ್ತರು, ಸ್ನೇಹಿತರು, ಸಹೋದ್ಯಗಿಗಳುಹಾಗೂ ಕುಟುಂಬದವರು ಆಗಮಿಸಿದ್ದರು. ಪತ್ರಕರ್ತರು ಸೇರಿದಂತೆ ಸಾಮಾಜಿಕ ಕಾರ್ಯಕರ್ತರು ಕೂಡ ಮದುವೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಬಂಗಾಳಿ ಮತ್ತು ಪಂಜಾಬಿ ಸಂಪ್ರದಾಯದಲ್ಲಿ ವಿವಾಹ ನಡೆದಿದೆ. ಮದುವೆಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜೋಡಿಗಳಿಬ್ಬರುಮೆಹಂದಿ ಹಾಕಿಕೊಂಡಿರುವ ಚಿತ್ರಗಳು ಹೆಚ್ಚಾಗಿ ಶೇರ್ ಆಗುತ್ತಿವೆ.
ಸುಪ್ರಿಯೊ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಅಭಯ್ ಕೂಡ ಎಂಎನ್ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ:ತೈವಾನ್ನಲ್ಲಿ ಮೊದಲ ಸಲಿಂಗ ವಿವಾಹ
ಭಾರತದಲ್ಲಿ ಸಲಿಂಗ ವಿವಾಹಕ್ಕೆ ಸುಪ್ರೀಂಕೋರ್ಟ್ ಕಳೆದ 3 ವರ್ಷಗಳ ಹಿಂದೆ ಒಪ್ಪಿಗೆ ನೀಡಿದೆ. ಆದರೆ ಸರ್ಕಾರ ಸಲಿಂಗ ವಿವಾಹವನ್ನು ಇನ್ನು ಕಾನೂನು ಬದ್ಧಗೊಳಿಸಿಲ್ಲ.
ಇದನ್ನೂ ಓದಿ:ಸಲಿಂಗಕಾಮ ಅಡ್ಡದಾರಿಯಲ್ಲ: ಸುಪ್ರೀಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.