ADVERTISEMENT

ಪಿಕ್ಚರ್ ಪ್ಯಾಲೇಸ್ | ಆಹಾ... ಚಾಕ್ಲೇಟು

ಪ್ರಜಾವಾಣಿ ವಿಶೇಷ
Published 6 ಜುಲೈ 2024, 5:12 IST
Last Updated 6 ಜುಲೈ 2024, 5:12 IST
<div class="paragraphs"><p>ಕೇಕಿನೊಂದಿಗೆ ಕ್ರೀಮು, ಸಿಹಿ ಸವಿ ಒಟ್ಟೊಟ್ಟಿಗೆ</p></div>

ಕೇಕಿನೊಂದಿಗೆ ಕ್ರೀಮು, ಸಿಹಿ ಸವಿ ಒಟ್ಟೊಟ್ಟಿಗೆ

   

ಪ್ರಜಾವಾಣಿಯ ಫೋಟೊ ಜರ್ನಲಿಸ್ಟ್‌ / ಎಂ.ಎಸ್‌. ಮಂಜುನಾಥ್‌

ಆಹಾ... ಚಾಕ್ಲೇಟು

ಪ್ರೀತಿಗೆ, ಸ್ನೇಹಕ್ಕೆ, ಮಮತೆಗೆ, ಪ್ರೇಮಕ್ಕೆ, ಕ್ಷಮೆಗೆ ಮತ್ತು ಖುಷಿಗೆ ಯಾವುದೇ ಸಂದರ್ಭವಾಗಿರಲಿ, ಕೂಡಲೇ ಮನಸಿಗೆ ಖುಷಿ ಕೊಡುವ ಸಿಹಿಯಿದ್ದರೆ ಅದು ಚಾಕ್ಲೆಟು ಸವಿ ಮಾತ್ರ.

ADVERTISEMENT

ಹತ್ತುಪೈಸೆಯಿಂದ ಆರಂಭಿಸಿ, ನಿಮ್ಮ ಕೊಳ್ಳುವ ಸಾಮರ್ಥ್ಯಕ್ಕೇ ಸವಾಲು ಹಾಕುವಷ್ಟು ದುಬಾರಿಯಾದ ಚಾಕ್ಲೆಟುಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಕಡುಕಂದು ಬಣ್ಣದ ಡಾರ್ಕ್‌ ಚಾಕ್ಲೆಟ್‌ನಿಂದ ಶುಭ್ರಶ್ವೇತ ಮಿಲ್ಕ್‌ ಚಾಕ್ಲೆಟ್‌ವರೆಗೂ ಯಾವುದೇ ಶೇಡ್‌ನ ಚಾಕ್ಲೆಟ್‌ ಇರಲಿ, ಸಿಹಿಯನ್ನು ಸವಿಯಿರಿ, ಚಾಕ್ಲೆಟ್‌ ದಿನವನ್ನು ಆಚರಿಸಿ ಎಂದು ಇತಿಹಾಸವೇ ಹೇಳುತ್ತದೆ.

ಯುರೋಪ್‌ ರಾಷ್ಟ್ರದಲ್ಲಿ ಚಾಕಲೇಟ್‌ ಸವಿ ಪರಿಚಯಿಸಿ ದ್ಯೋತಕವಾಗಿ ಜುಲೈ7ನ್ನು ಚಾಕ್ಲೆಟ್‌ ದಿನವಾಗಿ ಆಚರಿಸಲಾಗುತ್ತದೆ. ಬದುಕಿನ ಎಲ್ಲ ಕಹಿಗಳನ್ನೂ ಸಿಹಿಯಾಗಿಸುವ ಈ ಸವಿಯಿಂದ ಸಾಧ್ಯವಿರುವ ಖಾದ್ಯಗಳನ್ನೆಲ್ಲ ಮಾಡಿ, ಸವಿಯಿರಿ. ಸಾಧ್ಯವಿದ್ದಲ್ಲಿ ಚಾಕ್ಲೆಟ್‌ ಇತಿಹಾಸ ಅರಿಯಿರಿ, ಚಾಕ್ಲೆಟ್‌ ಫ್ಯಾಕ್ಟರಿಗೆ ಭೇಟಿ ನೀಡಿ, ಹೊಸಹೊಸ ರುಚಿಗಳನ್ನು ಮಾಡಿ ಸವಿಯಿರಿ ಎಂದು ಚಾಕ್ಲೆಟ್‌ ಡೇ ಘೋಷಿಸಿದೆ.

ಚಾಕ್ಲೆಟ್‌ ಐಸ್‌ಕ್ರೀಂ, ಪೇಸ್ಟ್ರಿ, ಹಾಟ್‌ ಫ್ಲಡ್ಜ್‌, ವೆಫಲ್ಸ್‌, ಕೊನೆಗೆ ಬೀಡಾವನ್ನೂ ಬಿಡಿದ ಈ ಚಾಕ್ಲೆಟ್‌ನ ವಿವಿಧ ರೂಪಗಳನ್ನು ಸೆರೆ ಹಿಡಿದಿದ್ದಾರೆ, ಪ್ರಜಾವಾಣಿಯ ಫೋಟೊ ಜರ್ನಲಿಸ್ಟ್‌ ಎಂ.ಎಸ್‌. ಮಂಜುನಾಥ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.