ADVERTISEMENT

ಪ್ರಜಾವಾಣಿ ಕ್ವಿಜ್ 78

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 19:30 IST
Last Updated 2 ಜುಲೈ 2019, 19:30 IST

1. ಧಾರಾವಿ ಎಂಬ ಕೊಳೆಗೇರಿ ಎಲ್ಲಿದೆ?

ಅ) ದೆಹಲಿ ಆ) ಹೈದರಾಬಾದ್‌
ಇ) ಕೊಲ್ಕತ್ತ ಈ) ಮುಂಬೈ

2. ‘ಸೋನೋಗ್ರಫಿ’ ಎಂಬ ಪರೀಕ್ಷೆಯನ್ನು ಯಾವುದರ ಪತ್ತೆಗಾಗಿ ಮಾಡಲಾಗುತ್ತದೆ?

ADVERTISEMENT

ಅ) ಹೃದಯದ ರಂಧ್ರ ಆ) ಮೂತ್ರಕೋಶದ ಕಲ್ಲು
ಇ) ಮೆದುಳಿನಲ್ಲಿ ಸ್ರಾವ ಈ) ಕಣ್ಣು ಬೇನೆ

3. ಒಂದು ಮೀಟರ್‌ನ ಮಿಲಿಯನ್‌ನಲ್ಲಿ ಒಂದು ಭಾಗದ ಅಳತೆಯನ್ನು ಏನೆಂದು ಕರೆಯಲಾಗುತ್ತದೆ?

ಅ) ಮೈಕ್ರಾನ್ ಆ) ನ್ಯಾನೋ
ಇ) ಮಿನಿಮೀಟರ್ ಈ) ಡೆಕಾ ಮೀಟರ್

4. ಗೋಪಾಲ ಕೃಷ್ಣ ಅಡಿಗರ ಯಾವ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ?

ಅ) ಸುವರ್ಣ ಕೀಟ ಆ) ಸುವರ್ಣ ಪುತ್ಥಳಿ
ಇ) ಭೂಮಿ ಗೀತ ಈ) ಭಾವ ತರಂಗ

5. ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’(ಡಿ.ಆರ್.ಡಿ.ಒ)ನ ಕೇಂದ್ರ ಕಚೇರಿ ಎಲ್ಲಿದೆ?

ಅ) ಬೆಂಗಳೂರು ಆ) ಮುಂಬೈ
ಇ) ದೆಹಲಿ ಈ) ಪುಣೆ

6. ಪ್ರತಿವರ್ಷ ಕಾರ್ಮಿಕರ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ?

ಅ) ಜನವರಿ 1 ಆ) ಏಪ್ರಿಲ್ 1
ಇ) ಜೂನ್ 1 ಈ) ಮೇ 1

7. ದಿಸ್‍ಪುರಕ್ಕೆ ಮುನ್ನ ಅಸ್ಸಾಂನ ರಾಜಧಾನಿಯಾಗಿದ್ದ ನಗರ ಯಾವುದು?

ಅ) ಶಿಲ್ಲಾಂಗ್ ಆ) ತೇಜ್ ಪುರ್
ಇ) ದಿಬ್ರೂಗಢ್ ಈ) ಶಿವಸಾಗರ್

8. ಇವರಲ್ಲಿ ಯಾರು ‘ಕರ್ನಾಟಕ ರತ್ನ’ ಪ್ರಶಸ್ತಿ ಪುರಸ್ಕೃತರಲ್ಲ?

ಅ) ಸಿ.ಎನ್.ಆರ್. ರಾವ್ ಆ) ಸುಧಾ ಮೂರ್ತಿ
ಇ) ಎಸ್. ನಿಜಲಿಂಗಪ್ಪ ಈ) ವೀರೇಂದ್ರ ಹೆಗ್ಗಡೆ

9. ‘ಬಟರ್ ಫ್ಲೈ ಸ್ಟ್ರೋಕ್’ ಎಂಬ ಶಬ್ದವು ಯಾವ ಕ್ರೀಡೆಗೆ ಸಂಬಂಧಿಸಿದೆ?

ಅ) ಈಜು ಆ) ಕುಸ್ತಿ ಇ) ಟೆನ್ನಿಸ್ ಈ) ವಾಲಿಬಾಲ್

10. ನರಮಂಡಲವು ಯಾವ ಮೂಲ ಘಟಕಗಳಿಂದ ಮಾಡಲ್ಪಟ್ಟ ವ್ಯವಸ್ಥೆಯಾಗಿದೆ?

ಅ) ಮೆದುಳು ಆ) ಬೆನ್ನುಮೂಳೆ
ಇ) ನ್ಯೂರಾನ್ ಈ) ನರಗಳು

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಲಿಬಿಯಾ 2. ಗಂಗೂಬಾಯಿ ಹಾನಗಲ್
3. ಮಾಧ್ಯಮ 4. ತೀನಂಶ್ರೀ 5. ಕಳ್ಳಿಗಳು 6. ಕಬ್ಬಿಣ
7. ಯುವರಾಜ್ ಸಿಂಗ್ 8. ಕ್ರುಸೇಡ್
9. ಉದ್ದಿನ ಬೇಳೆ 10. ಸಿದ್ಧಯ್ಯ ಪುರಾಣಿಕ

ಎಸ್‌. ಎಲ್‌. ಶ್ರೀನಿವಾಸ ಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.