1. ರಾಬರ್ಟ್ ಮುಗಾಬೆ ಯಾವ ದೇಶದ ಪ್ರಧಾನಿ ಹಾಗೂ ಅಧ್ಯಕ್ಷರಾಗಿದ್ದರು?
ಅ) ಚಿಲಿ ಆ) ಕೀನ್ಯಾ
ಇ) ನೈಜೀರಿಯಾ ಈ) ಜಿಂಬಾಬ್ಬೆ
2. ಶುದ್ಧ ನೀರಿನ ಪಿಎಚ್ ಮೌಲ್ಯವೆಷ್ಟು?
ಅ) ಏಳಕ್ಕಿಂತ ಕಡಿಮೆ ಆ) ಏಳು
ಇ) ಏಳಕ್ಕಿಂತ ಹೆಚ್ಚು ಈ)ಎಲ್ಲವೂ ಸರಿ
3. ಬಸವನ ಹುಳು ಯಾವ ಗುಂಪಿಗೆ ಸೇರಿದ ಜೀವಿ?
ಅ) ಮೃದ್ವಂಗಿಆ) ಕಶೇರುಕ
ಇ) ಅಕಶೇರುಕಈ) ಕಂಟಕ ಚರ್ಮಿ
4. ಸತತ 20 ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರುವ ಮಹಿಳಾ ಆಟಗಾರ್ತಿ ಯಾರು?
ಅ)ಶಾಂತಾ ರಂಗಸ್ವಾಮಿ ಆ) ಅಮಿತಾ ಶರ್ಮ
ಇ) ಕರುಜೈನ್ ಈ) ಮಿಥಾಲಿ ರಾಜ್
5.'ಕಳರಿಪಯಟ್' ಯಾವ ರಾಜ್ಯದ ಮೂಲದ ಸಮರಕಲೆ?
ಅ) ತೆಲಂಗಾಣಆ) ಆಂಧ್ರ
ಇ) ಕೇರಳಈ) ಪುದುಚೇರಿ
6. ‘ನಿರ್ವಾತ’ ಎಂಬ ಶಬ್ದದ ಅರ್ಥವೇನು?
ಅ) ನೀರು ಮತ್ತು ಗಾಳಿಆ) ಗಾಳಿ
ಇ) ಗಾಳಿ ಇಲ್ಲದಈ) ನಿರಂತರ ಗಾಳಿ
7. ಭೂಮಿಯ ಮೇಲ್ಪದರದ ಫಲಕಗಳು ತೇಲುತ್ತಾ ದೂರ ಸಾಗುವುದನ್ನು ವಿವರಿಸುವ ಸಿದ್ಧಾಂತ ಯಾವುದು?
ಅ)ವಲಸೆ ವಾದ ಆ) ಖಂಡಾಂತರ ಚಲನೆ
ಇ) ವಿಘಟನಾ ವಾದ ಈ) ಭೂಕಾಂತ ಚಲನೆ
8. ಇವುಗಳಲ್ಲಿ ಯಾವುದು ಗಿರೀಶ್ ಕಾಸರವಳ್ಳಿ ನಿರ್ದೇಶನದ ಚಲನಚಿತ್ರವಲ್ಲ?
ಅ) ಮೈಸೂರು ಮಲ್ಲಿಗೆ ಆ) ದ್ವೀಪ
ಇ) ಕಾನೂರು ಹೆಗ್ಗಡತಿ ಈ) ಯಾವುದೂ ಅಲ್ಲ
9. ' ಬ್ರೆಕ್ಸಿಟ್'ನ ಮೂಲಕ ಬ್ರಿಟನ್ ಯಾವುದರಿಂದ ಹೊರಬರಲು ಯತ್ನಿಸುತ್ತಿದೆ?
ಅ) ಕಾಮನ್‌ವೆಲ್ತ್
ಆ) ಯೂರೋಪಿಯನ್ ಯೂನಿಯನ್
ಇ) ವಿಶ್ವಸಂಸ್ಥೆ ಈ) ಸಂಯುಕ್ತ ರಾಷ್ಟ್ರ ಸಂಘ
10. ಅತ್ತಿಮಬ್ಬೆಯು ಯಾವ ಜೈನಕಾವ್ಯದ ಸಾವಿರ ಪ್ರತಿಗಳನ್ನು ಮಾಡಿಸಿದಳು?
ಅ) ಅಜಿತಪುರಾಣಆ) ಆದಿಪುರಾಣ
ಇ) ಶಾಂತಿ ಪುರಾಣ
ಈ) ಚಾವುಂಡರಾಯ ಪುರಾಣ
ಹಿಂದಿನ ಸಂಚಿಕೆಯ ಸರಿ ಉತ್ತರಗಳು
1. ನಾಲ್ಕು 2. ಮೈಸೂರು ಸ್ಯಾಂಡಲ್ ಸೋಪ್3. ಕಬಡ್ಡಿ 4. ಎ.ಆರ್.ಕೃಷ್ಣ ಶಾಸ್ತ್ರೀ-ಟಿ.ಎಸ್. ವೆಂಕಣ್ಣಯ್ಯ 5 . ರಿಯಲ್ಎಸ್ಟೇಟ್ 6. ಮುಳ್ಳು ಜೇನು 7. ಆಂಗ್ಲೋ ಇಂಡಿಯನ್ಸ್ 8. ಕದಿಯುವ ಚಟ 9. ಫೋಟೊ ಜರ್ನಲಿಸಂ 10. ಉತ್ತರ ಕನ್ನಡ
ಎಸ್.ಎಲ್. ಶ್ರೀನಿವಾಸಮೂರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.