1. ಭಾರತೀಯ ಸೇನೆಯು ನೀಡುವ ಶಾಂತಿಕಾಲದ ಅತ್ಯುನ್ನತ ಪ್ರಶಸ್ತಿ ಯಾವುದು?
ಅ) ವೀರ ಚಕ್ರ
ಆ) ಅಶೋಕ ಚಕ್ರ
ಇ) ಶಾಂತಿ ಚಕ್ರ ಈ) ಕೀರ್ತಿ ಚಕ್ರ
2.ಇವುಗಳಲ್ಲಿ ಯಾವುದು ಅಸಂಗತ ನಾಟಕ ಅಲ್ಲ?
ಅ) ಅಪ್ಪ ಆ) ತೆರೆಗಳು ಇ) ಯಮಳ ಪ್ರಶ್ನೆ ಈ) ವಿಗಡ ವಿಕ್ರಮರಾಯ
3. 20ನೇ ಶತಮಾನದ ಪೂರ್ವಾರ್ಧದಲ್ಲಿ ಕೆ.ಜಿ.ಎಫ್.ನಲ್ಲಿ ಚಿನ್ನದ ಗಣಿಗಾರಿಕೆ ಮಾಡುತ್ತಿದ್ದ ಸಂಸ್ಥೆ ಯಾವುದು?
ಅ)ಜಾನ್ ಟೇಲರ್ ಅಂಡ್ ಸನ್ಸ್ ಆ)ಜಾನ್ ಬೇಕರ್ ಅಂಡ್ ಸನ್ಸ್ ಇ) ಫ್ಲೀಟ್ ಅಂಡ್ ಕೋ ಈ)ಬೂಕರ್ ಅಂಡ್ ಬೂಕರ್ಸ್
4. ಅಮೆರಿಕದಲ್ಲಿ ಗುಲಾಮಗಿರಿಯನ್ನು ಸಾಂವಿಧಾನಿಕವಾಗಿ ಕೊನೆಗೊಳಿಸಿದ ಅಧ್ಯಕ್ಷ ಯಾರು?
ಅ) ಕೆನಡಿ ಆ) ವಾಷಿಂಗ್ಟನ್ ಇ) ಅಬ್ರಹಾಂ ಲಿಂಕನ್ ಈ) ಜಾರ್ಜ್ ಬುಷ್
5. ನಾವಿಕರು ಬಳಸುವ ದಿಕ್ಸೂಚಿಯನ್ನು ಯಾವ ದೇಶದಲ್ಲಿ ಆವಿಷ್ಕರಿಸಲಾಯಿತು?
ಅ) ಭಾರತ ಆ) ಇಟಲಿ ಇ) ಚೀನಾ ಈ) ಫ್ರಾನ್ಸ್
6. ಪ್ರಸ್ತುತ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವವರು ಯಾರು?
ಅ) ಬ್ರಿಜೇಶ್ ಮಿಶ್ರ ಆ) ಅಜಿತ್ ದೋವಲ್
ಇ) ಜೆ.ಎನ್. ದೀಕ್ಷಿತ್
ಈ) ಎಂ.ಕೆ. ನಾರಾಯಣನ್
7. ವಿಶ್ವಬ್ಯಾಂಕಿನ ಅಧ್ಯಕ್ಷರ ಆಡಳಿತಾವಧಿ ಎಷ್ಟು ವರ್ಷಗಳು?
ಅ) ಆರು ಆ) ಐದು ಇ) ನಾಲ್ಕು ಈ) ಮೂರು
8. ‘ಅತಿಸಾರ’ ಎಂದರೇನು?
ಅ) ಕೆಮ್ಮು ಆ) ನೆಗಡಿ ಇ) ಜ್ವರ ಈ) ಭೇದಿ
9. ‘ವಿಜ್ಞಾನ ವಿಷಯಗಳ ರಾಣಿ’ ಎಂದು ಯಾವ ವಿಷಯವನ್ನು ಕರೆಯಲಾಗುತ್ತದೆ?
ಅ) ಗಣಿತ ಆ) ಭೌತ ವಿಜ್ಞಾನ
ಇ) ರಸಾಯನ ವಿಜ್ಞಾನ ಈ) ಜೀವ ವಿಜ್ಞಾನ
10. ವಿಶ್ವ ಮೋಹನ ಭಟ್ ಯಾವ ವಾದ್ಯವನ್ನು ನುಡಿಸುವ ಮೂಲಕ ಪ್ರಸಿದ್ಧರಾಗಿದ್ದಾರೆ?
ಅ) ವೀಣೆ ಆ) ರುದ್ರ ವೀಣೆ
ಇ) ಗೋಟುವಾದ್ಯ ಈ) ಮೋಹನ ವೀಣೆ
ಕಳೆದ ಸಂಚಿಕೆಯ ಸರಿ ಉತ್ತರಗಳು
1. ಪೋರ್ಚುಗೀಸರು 2. ವಾಸನೆ ರಹಿತ
3. ಬಿ. ಪುಟ್ಟಸ್ವಾಮಯ್ಯ 4. ಒಂಬತ್ತು
5. ಗೊಂಡರು 6. ಎಲ್‌ಟಿಟಿಇ 7. ಚಿನ್ನ 8. 1975-1977 9. ಅಲಾಸ್ಕ
10. ಭಾಗ್ಯದ ಬಾಗಿಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.