ADVERTISEMENT

ಸರ್ಕಾರ ಹೀಗೆ ಮಾಡಬಹುದು

ದಲಿತ ವಿದ್ಯಾರ್ಥಿಗಳಿಗೆ ಅರೆಶುಲ್ಕ ಭಾಗ್ಯ

ಕೆ.ಸಿ.ಪುಟ್ಟಸ್ವಾಮಿ ಮೈಸೂರು.
Published 23 ಫೆಬ್ರುವರಿ 2016, 19:30 IST
Last Updated 23 ಫೆಬ್ರುವರಿ 2016, 19:30 IST
ಸರ್ಕಾರ ಹೀಗೆ ಮಾಡಬಹುದು
ಸರ್ಕಾರ ಹೀಗೆ ಮಾಡಬಹುದು   

ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಈ ಕೆಳಕಂಡ ಕಾರ್ಯಕ್ರಮಗಳನ್ನು ಜಾರಿಗೆ ತರುವುದರ ಮೂಲಕ ರಾಜ್ಯದ ಅಭಿವೃದ್ಧಿಗೆ ಪೂರಕವಾಗಬಹುದು.

* ಕೃಷಿ ಬೆಲೆ ಆಯೋಗವು ನೀಡಿರುವ ವರದಿ ಪೂರ್ಣ ಅನುಷ್ಠಾನ.
* ಖಾಸಗಿ ಮತ್ತು ಸಹಕಾರ ವಲಯದಲ್ಲಿ ಮೀಸಲಾತಿ ಜಾರಿ.
* ಹೋಬಳಿಗೆ ಒಂದರಂತೆ ಸ್ಮಾರ್ಟ್ ಹಳ್ಳಿಗಳ ಅಭಿವೃದ್ಧಿ.
* ಬೆಂಗಳೂರು ಒನ್, ಕರ್ನಾಟಕ ಒನ್‌ ಗಳಂತೆ 2 ಸಾವಿರ ಜನಸಂಖ್ಯೆ ಮಾನದಂಡವಾಗಿಟ್ಟುಕೊಂಡು ಹಳ್ಳಿಗಳ ಒನ್ ಕೇಂದ್ರ ಸ್ಥಾಪನೆ, ಅಲ್ಲಿ ಎಲ್ಲಾ ತರಹದ ಪಾವತಿಗೆ ಅವಕಾಶ ಮತ್ತು ಎಲ್ಲಾ ಸೌಲಭ್ಯಗಳ ಮಾಹಿತಿ
* ಹಳ್ಳಿಗಾಡಿನಲ್ಲಿರುವ ಎಲ್ಲಾ ಶಾಲೆಗಳನ್ನು ಉನ್ನತೀಕರಿಸಿ ಎಲ್.ಕೆ.ಜಿ/ಯು.ಕೆ.ಜಿ ಶಿಕ್ಷಣದ ಜೊತೆಗೆ ಕಾನ್ವೆಂಟ್ ಶಿಕ್ಷಣ ಹಾಗೂ ಎಲ್.ಕೆ.ಜಿಯಿಂದ ಇಂಗ್ಲಿಷ್ ನ್ನು ಒಂದು ಭಾಷೆಯಾಗಿ ಕಲಿಸಲು ಕ್ರಮ.
* ಜಾತಿ ಗಣತಿ ವರದಿ ಶೀಘ್ರ ಬಿಡುಗಡೆ, ಗಣತಿ ಆಧಾರದಲ್ಲಿ  ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ, ಆರ್ಥಿಕ, ಸೌಲಭ್ಯಗಳ ಹಂಚಿಕೆ.
* ಹಳ್ಳಿಗರ ವಲಸೆ ತಪ್ಪಿಸಲು ಗ್ರಾಮೀಣ ಭಾಗದಲ್ಲಿ ಆಧುನಿಕ ತಂತ್ರಜ್ಞಾನದ ಕೈಗಾರಿಕೆಗಳ ಸ್ಥಾಪನೆ
* ರಾಜ್ಯದ ಎಲ್ಲಾ ಕೆರೆಗಳ ಪುನರ್‌ಜೀವನ ಮತ್ತು ಆ ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆ ಜಾರಿ.
* ರಾಜ್ಯದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಮೀನುಗಳ ತೆರವು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಾವಿರ ದಿನ ಪೂರೈಸಿದ್ದಾರೆ. ತಾವು ಸಾಗಿದ ಹಾದಿಯನ್ನು ತಿರುಗಿ ನೋಡಲು, ತಮ್ಮ ನಿಲುವುಗಳನ್ನು ವಿಮರ್ಶೆಗೆ ಒಳಪಡಿಸಲು, ಕಾರ್ಯವೈಖರಿಯನ್ನು ಬದಲಾವಣೆ ಮಾಡಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ. ಸರ್ಕಾರದ ಭಾಗವಾಗಿರುವವರು ಜನರ ಅನಿಸಿಕೆ, ಅಭಿಪ್ರಾಯಗಳಿಗೆ ಮನ್ನಣೆ ಕೊಟ್ಟು ನಡೆದರೆ ಮುಂದೆ ಅಧಿಕಾರದ ಆಶಾಭಾವನೆ ಇಡಬಹುದು, ನಿಲುವಿನಲ್ಲಿ ಬದಲಾವಣೆ ಆಗದಿದ್ದರೆ ಮುಂದಿನ ಚುಣಾವಣೆಯಲ್ಲಿ ಜನರ ಕೋಪಕ್ಕೆ ಗುರಿಯಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.