ನವದೆಹಲಿ (ಪಿಟಿಐ): ಬೆಂಗಳೂರಿನ ಶೂಟರ್ ಪ್ರಕಾಶ್ ನಂಜಪ್ಪ ಅವರು ಅಜರ್‌ಬೈಜಾನ್ ಗಬಲಾದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವ ಕಪ್ ಶೂಟಿಂಗ್‌ನಲ್ಲಿ ಪುರುಷರ 50 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಎಂಟನೇ ಸ್ಥಾನ ಪಡೆಯುವ ಮೂಲಕ ಮುಂದಿನ ವರ್ಷ ನಡೆಯಲಿರುವ ರಿಯೊ ಒಲಿಂಪಿಕ್ಸ್‌ಗೆ ಸ್ಥಾನ ಗಿಟ್ಟಿಸಿದ್ದಾರೆ.
39 ವರ್ಷದ ಪಿ.ನಂಜಪ್ಪಾ, ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಭಾರತದ ಆರನೇ ಶೂಟರ್.
ಅರ್ಹತಾ ಸುತ್ತಿನಲ್ಲಿ ಪ್ರಕಾಶ್ ಅವರು ನಿಖರವಾಗಿ ಗುರಿಯಿಟ್ಟು 567 ಪಾಯಿಂಟ್ ಗಳಿಸಿ ಎರಡನೇ ಸ್ಥಾನ ಪಡೆದರು. ಎಂಟನೇ ಫೈನಲ್ ಅವರು 70.1 ಪಾಯಿಂಟ್ ಗಳಿಸಿ ಟೂರ್ನಿಯಿಂದ ಹೊರಬಿದ್ದರು.ಆದರೆ, ನಿಖರ್ ಗುರಿಗಳ ಮೂಲಕ ವೀಕ್ಷಕರ ಚಪ್ಪಾಳೆ ಗಿಟ್ಟಿಸಿ ಮೆಚ್ಚುಗೆಗೆ ಪಾತ್ರರಾದರು.
ವಿಶ್ವ 52ನೇ ಕ್ರಮಾಂಕದಲ್ಲಿರುವ ಪ್ರಕಾಶ್, 567 ಪಾಯಿಂಟ್‌ಗಳ ಮೂಲಕ ಅರ್ಹತಾ ಸುತ್ತಿನಲ್ಲಿ ಎರಡನೇಯವರಾಗಿ ಹೊರ ಹೊಮ್ಮಿದರು.ರಿಯೊ ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಪಡೆದಿರುವ ಜಿತು ರಾಯ್ ಅವರು ಕೂಡ ಸ್ಪರ್ಧೆಯಲ್ಲಿದ್ದರು. ಅವರು ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರು.
ಪ್ರಕಾಶ್, ರಾಯ್ ಅವರಲ್ಲದೇ ಅಭಿನವ್ ಬಿಂದ್ರಾ, ಗಗನ್ ನಾರಂಗ್, ಅಪೂರ್ವಿ ಚಾಂದೇಲಾ ಹಾಗೂ ಗುರುಪ್ರೀತ್ ಸಿಂಗ್ ಅವರು 2016ರಲ್ಲಿ ನಡೆಯಲಿರುವ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
2013ರಲ್ಲಿ ವಿಶ್ವ ಕಪ್ ಶೂಟಿಂಗ್ ಟೂರ್ನಿಯಲ್ಲಿ ಸೆರೆಬ್ರಲ್ ಪಾಲ್ಸಿಗೆ ತುತ್ತಾಗಿದ್ದ ಪ್ರಕಾಶ್ ಅವರು, ಬಳಿಕ ಚೇತರಿಸಿಕೊಂಡಿದ್ದರು. ಕಠಿಣ ಪರಿಶ್ರಮದ ಮೂಲಕ ಇರಾನ್ ರಾಜಧಾನಿ ಟೆಹರಾನ್‌ನಲ್ಲಿ 2013ರ ಅಕ್ಟೋಬರ್‌ನಲ್ಲಿ ನಡೆದ ಏಷ್ಯನ್ ಏರ್ ಗನ್ ಚಾಂಪಿಯನ್‌ಶಿಪ್‌ನಲ್ಲಿ 50 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಸಾಧನೆ ತೋರಿದ್ದರು.
2014ರಲ್ಲಿ ಗ್ಲಾಸ್ಗೊದಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಹಾಗೂ ಇಂಚೆನ್‌ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಸಾಧನೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.