ಬೆಂಗಳೂರು: ರೇಸ್ ಪ್ರಿಯರು ಕಾತರದಿಂದ ಎದುರು ನೋಡುತ್ತಿರುವ ‘ಕಿಂಗ್‌ಫಿಶರ್ ಅಲ್ಟ್ರಾ ಡರ್ಬಿ‘ ಇಂದು ಸಂಜೆ ಬೆಂಗಳೂರು ಟರ್ಫ್ ಕ್ಲಬ್ ಆವರಣದಲ್ಲಿ ನಡೆಯಲಿದೆ.
ಬೆಂಗಳೂರು ರೇಸ್‌ಗಳ ಅತ್ಯಂತ ಶ್ರೀಮಂತ ರೇಸ್ ಡರ್ಬಿಯನ್ನು ಯುನೈ ಟೆಡ್ ಬ್ರೂವರೀಸ್ ಸಹಪ್ರಾಯೋಜಕತ್ವ ದಲ್ಲಿ ಬಿ.ಟಿ.ಸಿ. ಏರ್ಪಡಿಸಿದೆ. ಒಟ್ಟು ₹ 2.70 ಕೋಟಿ ಬಹುಮಾನದ ಮೊತ್ತದಲ್ಲಿ ಗೆಲ್ಲುವ ಕುದುರೆಗೆ ಸುಮಾರು ₹ 1.59 ಕೋಟಿ ಮೀಸಲಾಗಿಟ್ಟಿರುವ ಈ ಡರ್ಬಿ ಯಲ್ಲಿ 13 ಕುದುರೆಗಳು ಭಾಗವಹಿಸುತ್ತಿವೆ.
ಬಹುತೇಕ ಕುದುರೆಗಳು ಸಮಬಲದ ಸಾಮರ್ಥ್ಯ ಮೆರೆಯುವ ನಿರೀಕ್ಷೆಯಿದ್ದು ಗೆಲ್ಲುವ ಕುದುರೆಯನ್ನು ನಿಖರವಾಗಿ ಗುರುತಿಸುವ ಸವಾಲು ಇದೆ.
ಕ್ಯಾಸ್ಲ್‌ಬ್ರಿಡ್ಜ್, ಪರ್ಫೆಕ್ಟ್ ಸ್ಟಾರ್, ಒಲಂಪಿಯಾ ಫಿಲ್ಡ್ಸ್ , ಮ್ಯಾನಿಫೋಲ್ಡ್ ಮತ್ತು ವಿಂಡ್ಸರ್ ಫಾರೆಸ್ಟ್ ಪ್ರಮುಖ ಸ್ಪರ್ಧಿಗಳಾಗಿ ಕಂಡುಬರುತ್ತಿದ್ದರೂ, ಒಂದು ಮೈಲಿ ದೂರದ ಕೋಲ್ಟ್ಸ್ ಚಾಂಪಿಯನ್‌ಷಿಪ್ ಸ್ಟೇಕ್ಸ್ ರೇಸ್‌ನಲ್ಲಿ ಮೊದಲ ಮೂರು ಸ್ಥಾನಗಳಿಸಿರುವ ಕ್ಯಾಸ್ಲ್‌ಬ್ರಿಡ್ಜ್. ಪರ್ಫೆಕ್ಟ್ ಸ್ಟಾರ್ ಮತ್ತು ಒಲಂಪಿಯಾ ಫಿಲ್ಡ್ಸ್ ಮುಂಚೂಣಿಯಲ್ಲಿ ಇರುವ ಸಾಧ್ಯತೆಗಳು ಇವೆ.
ಪರ್ಫೆಕ್ಟ್ ಸ್ಟಾರ್ ಇಂದಿನ 400 ಮೀಟರ್ಸ್‌ಗಿಂತ ಹೆಚ್ಚಿನ ಓಟದಲ್ಲಿ ಕ್ಯಾಸ್ಲ್‌ಬ್ರಿಡ್ಜ್ ವಿರುದ್ಧ ಗೆಲುವು ಪಡೆಯುವ ಸಾಧ್ಯತೆಯಿದೆ ಎಂದು ನಮ್ಮ ನಿರೀಕ್ಷೆ.
**
**
ಮಧ್ಯಾಹ್ನ 1.15ಕ್ಕೆ ಪ್ರಾರಂಭವಾಗಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:
1. ಹೈದರಾಬಾದ್ ಕಪ್; 1200 ಮೀ. : ಅಥೆನಾ 6, ಸೆಡ್ಯುಲಸ್ 9, ಡಾ.ಲೋಗನ್ 2
2. ಮುಂಬೈ ಕಪ್–ಡಿ.1; 1200 ಮೀ. : ಮಿನಿವರ್ ರೋಸ್ 8, ಮಿಂಟ್ 9, ಚೈನಾ ಒನ್ 4
3. ಕೋಲ್ಕತ್ತ ಕಪ್; 1800 ಮೀ. : ಮೆಜೆಸ್ಟಿರೊ 7, ಫ್ಯಾಬ್ಯುಲಸ್ 4, ಸ್ಟಾರ್ ಕ್ರಾಕರ್ 8
4. ದೆಹಲಿ ಕಪ್; 1600 ಮೀ.: ವಿಂಡ್ ಸ್ಟ್ರೈಕರ್ 5, ಲೆಮ್ರಿ 1, ಫೈಂಡ್ 10
5. ಚೆನ್ನೈ ಕಪ್; 1200 ಮೀ.: ಮೈಗ್ರೇಟರ್ 3, ಪ್ರಿವಲೆಂಟ್ ಫೋರ್ಸ್ 4, ಅಮೇಜಿಂಗ್ ಏಂಜೆಲ್ 5
6. ಕಿಂಗ್‌ಫಿಶರ್ ಅಲ್ಟ್ರಾ ಡರ್ಬಿ ಬೆಂಗಳೂರು; 2000 ಮೀ.: ಪರ್ಫೆಕ್ಟ್ ಸ್ಟಾರ್ 6, ಒಲಂಪಿಯಾ ಫೀಲ್ಡ್ಸ್ 5, ಕ್ಯಾಸ್ಲ್‌ಬ್ರಿಡ್ಜ್ 3
7. ಮೈಸೂರು ಕಪ್; 1400 ಮೀ.: ಸ್ಪಾಟ್‌ಲೈಟ್ 8, ಡಾನ್ ಡೆಲಾ ವೇಗ 5, ಪಿನ್ಯಾಡ 2
8. ಮುಂಬೈ ಕಪ್–ಡಿ.2; 1200 ಮೀ.: ಪಾಂಚೊವಿಲ್ಲಾ 2, ರೊಮ್ಯಾಂಟಿಕ್ ಹೆಲೆನ್ 10, ವ್ಯಾಲಿ ಸೆಪ್ಟ್ರ್ 3
ಉತ್ತಮ ಬೆಟ್: ಅಥೆನಾ
ಜಾಕ್‌ಪಾಟ್‌ಗೆ 4,5,6,7,8; ಮೊದಲನೇ ಟ್ರಿಬಲ್‌ಗೆ 3,4,5; ಎರಡನೇ ಟ್ರಿಬಲ್‌ಗೆ 6,7,8.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.