ಲಂಡನ್: ರೋಮಾಂಚಕ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ ಗರಿಗೆದರಿದೆ.
ಕೆನಿಂಗ್ಟನ್ ಓವಲ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.
ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕ್ ಆರಂಭದಲ್ಲೇ ರಕ್ಷಣಾತ್ಮಕ ಆಟ್ಟಕ್ಕೆ ಒತ್ತು ನೀಡಿತ್ತು. ಜತೆಗೆ, ಫಕರ್ ಜಮನ್ ಶತಕ(114), ಹಾಗೂ ಅಜರ್ ಅಲಿ (59) ಅರ್ಧಶತಕದ ಉತ್ತಮ ಜತೆಯಾಟದ ನೆರವಿನಿಂದ ಪಾಕ್ ಬೃಹತ್ ಮೊತ್ತ ಪೇರಿಸಿದೆ.
50 ಓವರ್‌ಗಳಲ್ಲಿ ಪಾಕಿಸ್ತಾನ 4 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿದೆ. (ಅಜರ್ ಅಲಿ 59, ಫಕರ್ ಜಮನ್ 114, ಬಾಬರ್ ಆಜಮ್ 46, ಶೊಯೆಬ್ ಮಲಿಕ್ 12, ಮಹಮ್ಮದ್ ಹಫೀಜ್ ಬ್ಯಾಟಿಂಗ್ 57, ಐಮದ್ ವಾಸಿಮ್ ಬ್ಯಾಟಿಂಗ್ 25).
ಭಾರತದ ಪರ: ಭುವನೇಶ್ವರ್ ಕುಮಾರ್ 1, ಕೇದಾರ್ ಜಾದವ್ 1, ಹಾರ್ದಿಕ್ ಪಾಂಡ್ಯ 1 ವಿಕೆಟ್ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.