ADVERTISEMENT

‘ಟೆಮಿರಿಟಿ’ಗೆ ಅದ್ಭುತ ಗೆಲುವು

ಟರ್ಫ್‌ ಇನ್ವಿಟೇಶನ್‌ ಕಪ್‌

ಡಿ.ರವಿ ಕುಮಾರ್
Published 5 ಮಾರ್ಚ್ 2017, 19:30 IST
Last Updated 5 ಮಾರ್ಚ್ 2017, 19:30 IST
‘ಟೆಮಿರಿಟಿ’ಗೆ ಅದ್ಭುತ ಗೆಲುವು
‘ಟೆಮಿರಿಟಿ’ಗೆ ಅದ್ಭುತ ಗೆಲುವು   

ಬೆಂಗಳೂರು: ಪಿ.ಸಿ. ಶ್ರಾಫ್‌ ತರಬೇತಿ ಯಲ್ಲಿ ಪಳಗಿರುವ ಮುಂಬೈ ಸ್ಪರ್ಧಿ ‘ಟೆಮಿರಿಟಿ’ ಅತ್ಯಂತ ಗೌರವಾನಿತ್ವ ರೇಸ್‌ ‘ದಿ ಇಂಡಿಯನ್‌ ಟರ್ಫ್‌ ಇನ್ವಿಟೇಶನ್‌ ಕಪ್‌’ನಲ್ಲಿ ಗೆಲುವನ್ನು ದಾಖಲೆ ಸಮಯ ದಲ್ಲಿ ಗೆದ್ದು ಚಾಂಪಿಯನ್‌ ಆಫ್‌ ಚಾಂಪಿ ಯನ್‌ ಪಟ್ಟ ಗಳಿಸಿತು.

  ಬೆಂಗಳೂರು ಟರ್ಫ್‌ ಕ್ಲಬ್‌ ಆವರಣ ದಲ್ಲಿ ಸುಮಾರು 24,000 ದಾಖಲೆ ಸಂಖ್ಯೆಯಲ್ಲಿ ಹಾಜರಿದ್ದ  ರೇಸ್‌ ಪ್ರಿಯರು ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

ಭಾನುವಾರ ಮುಕ್ತಾಯಗೊಂಡ ‘ದಿ ಇನ್ವಿಟೇಶನ್‌ ಕಪ್‌ ವಾರಾಂತ್ಯ’ದ ರೇಸ್‌ ಗಳ ಪ್ರಧಾನ ಆಕರ್ಷಣೆ ‘ದಿ ಇಂಡಿಯನ್‌ ಟರ್ಫ್‌ ಇನ್ವಿಟೇಶನ್‌ ಕಪ್‌’ ರೇಸ್‌ ಕೋಲ್ಕತ್ತ ಮತ್ತು ಮುಂಬೈ ಡರ್ಬಿ ವಿಜೇತ ‘ಹಾಲ್‌ ಆಫ್‌ ಫೇಮರ್‌’ ಮತ್ತು ಬೆಂಗಳೂರು ಡರ್ಬಿ ವಿಜೇತ ‘ಟೊರೊ ರೊಸೊ‘ ನಡುವಣ ಹೋರಾಟವೆಂದು ಬಿಂಬಿಸಲಾಗಿತ್ತು.

ADVERTISEMENT

ಆದರೆ, ಮುಂಬೈ ಡರ್ಬಿಯಲ್ಲಿ ‘ಹಾಲ್‌ ಆಫ್‌ ಫೇಮರ್‌’ ಎದುರು ಮೂರನೇ ಸ್ಥಾನ ಪಡೆದಿದ್ದ ‘ಟೆಮೆರಿಟಿ’ ಆಶ್ಚರ್ಯಕರ ರೀತಿಯಲ್ಲಿ ತನ್ನ ಫಾರ್ಮ್ ಅನ್ನು ಅಭಿವೃದ್ಧಿಗೊಳಿಸಿಕೊಂಡು ಎಲ್ಲ ರನ್ನು ಚಕಿತಗೊಳಿಸಿತು.

‘ಹಾಲ್‌ ಆಫ್‌ ಫೇಮರ್‌’ ಮತ್ತು ‘ಟೊರೊರೊಸೊ’ ಮೊದಲನೇ ಮತ್ತು ಎರಡನೇ ಫೇವರಿಟ್‌ ಎನಿಸಿಕೊಂಡಿ ದ್ದರೆ, ‘ಟಿಮಿರಿಟಿ’ ಮೂರನೇ ಫೇವರಿಟ್‌ ಎನಿಸಿತ್ತು.

2400 ಮೀಟರ್ಸ್‌ ದೂರದ ಈ ರೇಸ್‌ ಪ್ರಾರಂಭದಿಂದಲೇ ‘ಹಾಲ್‌ ಆಫ್‌ ಫೇಮರ್‌’ ಲೀಡ್‌ ಪಡೆದು ಮುಂದೆ ಓಡುತ್ತಿದ್ದರೆ, ‘ಟೊರೊರೊಸ್ಸೊ’ ಎರ ಡನೇ ಸ್ಥಾನದಲ್ಲಿ ಮತ್ತು ‘ಟೆಮೆರಿಟಿ’ ಐದನೇ ಸ್ಥಾನದಲ್ಲಿ ಓಡುತ್ತಿದ್ದವು.  ಕೊನೆಯ ತಿರುವಿನ ನಂತರ, ನೇರ 400 ಮೀಟರ್ಸ್‌ ಓಟದಲ್ಲಿ ‘ಟೊರೊರೊಸ್ಸೊ’ ಮುನ್ನುಗ್ಗಿ ಲೀಡ್‌ ಪಡೆಯಿತು.  ಆದರೆ, ಈ ಮುನ್ನಡೆಯನ್ನು  ಕಾಪಾಡಿಕೊಳ್ಳು ವುದರಲ್ಲಿ ಸಫಲವಾಗಲಿಲ್ಲ. ಜಾಕಿ ನೀರಜ್‌ ರಾವಲ್‌ ಸವಾರಿಯಲ್ಲಿ ‘ಟೆಮೆ ರಿಟಿ’ ವೇಗವಾಗಿ ಓಡಿಬಂದು ಇನ್ನೂ 200 ಮೀಟರ್ಸ್‌ ಇರುವಂತೆಯೇ ಲೀಡ್‌ ಪಡೆದು 2 ¾ ಲೆಂಗ್ತ್‌ಗಳಿಂದ ದಾಖ ಲೆಯ ಎರಡು ನಿಮಿಷ 28.85 ಸೆಕೆಂಡ್ಸ್‌ ಸಮಯದಲ್ಲಿ ಗೆಲುವನ್ನು ಸಂಪಾದಿಸಿತು.

ಕ್ಲಾಸಿಕ್‌ ಸ್ಟೈಲ್‌ 2 ನಿಮಿಷ 30.2 ಸೆಕೆಂಡ್ಸ್‌ಗಳಲ್ಲಿ 1992ರಲ್ಲಿ ಬೆಂಗ ಳೂರಿನಲ್ಲಿ ನಡೆದ ಇನ್ವಿಟೇಶನ್‌ ಕಪ್‌ ಅನ್ನು   ಗೆದ್ದುಕೊಂಡಿತ್ತು.  ಸುಪ್ರೀಂ ಜನ ರಲ್‌ ತುಂಬಾ ಹಿಂದಿನಿಂದ ಓಡಿ ಬಂದು ಎರಡನೇ ಸ್ಥಾನ ಪಡೆಯಿತು.  ಅಜ್ಜುರೊ ಕೂಡಾ ಹಿಂದಿನಿಂದ ಓಡಿಬಂದು ‘ನೋಸ್‌‘ ಅಂತರದಿಂದ ‘ಟೊರೊರೊ ಸ್ಸೊ’ವನ್ನು ಸೋಲಿಸಿ ಮೂರನೇ ಸ್ಥಾನ ಪಡೆಯಿತು. ಫೇವರಿಟ್‌ ‘ಹಾಲ್‌ ಆಫ್‌ ಫೇಮರ್‌’ ಒಂಬತ್ತನೇ ಸ್ಥಾನ ಪಡೆಯಿತು.

**

(ಪಿ.ಕೆ. ಮೆಹ್ರಾ ಸ್ಮಾರಕ ಸೂಪರ್‌ ಮೈಲ್‌ ಕಪ್‌ ರೇಸ್‌ನಲ್ಲಿ ಪ್ರಶಸ್ತಿ ಗೆದ್ದ ಸರ್ಜೆಂಟ್‌ ಅಟ್‌ ಆರ್ಮ್ಸ್‌ ಕುದುರೆಯೊಂದಿಗೆ ಜಾಕಿ ಎ ಸಂದೇಶ್‌ ಖುಷಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.