ADVERTISEMENT

ಮುಂದೆದೂ ಆಸ್ಟ್ರೇಲಿಯಾ ಪರ ಆಡುವುದಿಲ್ಲ: ಡೇವಿಡ್‌ ವಾರ್ನರ್‌ ಕಠಿಣ ನಿರ್ಧಾರ

ಏಜೆನ್ಸೀಸ್
Published 31 ಮಾರ್ಚ್ 2018, 8:48 IST
Last Updated 31 ಮಾರ್ಚ್ 2018, 8:48 IST
ಮುಂದೆದೂ ಆಸ್ಟ್ರೇಲಿಯಾ ಪರ ಆಡುವುದಿಲ್ಲ: ಡೇವಿಡ್‌ ವಾರ್ನರ್‌ ಕಠಿಣ ನಿರ್ಧಾರ
ಮುಂದೆದೂ ಆಸ್ಟ್ರೇಲಿಯಾ ಪರ ಆಡುವುದಿಲ್ಲ: ಡೇವಿಡ್‌ ವಾರ್ನರ್‌ ಕಠಿಣ ನಿರ್ಧಾರ   

ಸಿಡ್ನಿ: ಚೆಂಡು ವಿರೂಪ ಪ್ರಕರಣದ ಸಂಬಂಧ ಮತ್ತೊಮ್ಮೆ ಸಾರ್ವಜನಿಕವಾಗಿ ಕ್ಷಮೆ ಕೇಳಿರುವ ಆಸ್ಟ್ರೇಲಿಯಾ ತಂಡದ ಮಾಜಿ ಉಪನಾಯಕ ಡೇವಿಡ್‌ ವಾರ್ನರ್‌, ಕಣ್ಣೀರು ಸುರಿಸುತ್ತಲೇ ಮತ್ತೆಂದೂ ಆಸ್ಟ್ರೇಲಿಯಾ ಪರ ಕ್ರಿಕೆಟ್‌ ಆಡುವುದಿಲ್ಲ ಎಂಬ ಕಠಿಣ ನಿರ್ಧಾರ ಪ್ರಕಟಿಸಿದ್ದಾರೆ.

ಕ್ರಿಕೆಟ್‌ ಆಸ್ಟ್ರೇಲಿಯಾದ 12 ತಿಂಗಳ ನಿಷೇಧದ ಬಳಿಕವೂ ಆಸ್ಟ್ರೇಲಿಯಾ ತಂಡದಲ್ಲಿ ಕ್ರಿಕೆಟ್‌ ಆಡದಿರುವ ನಿರ್ಧಾರ ಘೋಷಿಸಿದ್ದಾರೆ. ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಒತ್ತರಿಸಿ ಬಂದ ಕಣ್ಣೀರು ತಡೆಯದೇ ಬರೆದು ತಂದಿದ್ದ ಪ್ರಕಟಣೆಯನ್ನು ಡೇವಿಡ್‌ ವಾರ್ನರ್‌ ಓದುತ್ತಾ ತನ್ನದು ಅಕ್ಷಮ್ಯ ಕಾರ್ಯ ಎಂದಿದ್ದಾರೆ.

‘ನನ್ನ ದೇಶಕ್ಕಾಗಿ ಮತ್ತೆ ಆಡುವ ಅವಕಾಶ ಸಿಗುವ ಸಣ್ಣ ಭರವಸೆಯಿತ್ತು. ಆದರೆ, ಅದು ಮತ್ತೆಂದಿಗೂ ಆಗುವುದಿಲ್ಲ...’ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.