ನವದೆಹಲಿ (ಪಿಟಿಐ): ನಾಯಕ ಶ್ರೇಯಸ್ ಅಯ್ಯರ್ (ಔಟಾಗದೆ 93; 40ಎ, 3ಬೌಂ, 10 ಸಿ) ಮತ್ತು ಪೃಥ್ವಿ ಶಾ (62; 44ಎ, 7ಬೌಂ, 2ಸಿ) ಅವರ ಅಮೋಘ ಬ್ಯಾಟಿಂಗ್ ಬಲದಿಂದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ನೇ ಆವೃತ್ತಿಯ ಪಂದ್ಯದಲ್ಲಿ 55ರನ್‌ಗಳಿಂದ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಗೆದ್ದಿತು.
ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಮೊದಲು ಬ್ಯಾಟ್ ಮಾಡಿದ ಡೇರ್‌ಡೆವಿಲ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 219ರನ್ ಗಳಿಸಿತು.
ಕಠಿಣ ಗುರಿ ಬೆನ್ನಟ್ಟಿದ ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್ 9 ವಿಕೆಟ್‌ಗೆ 164ರನ್ ಗಳಿಸಲಷ್ಟೇ ಶಕ್ತವಾಯಿತು.
ಡೆಲ್ಲಿ ತಂಡದ ಪರ ಪೃಥ್ವಿ ಶಾ (62; 44ಎ, 7ಬೌಂ, 2ಸಿ) ಮತ್ತು ಕಾಲಿನ್ ಮನ್ರೊ (33; 18ಎ,4ಬೌಂ,2ಸಿ) ಮಿಂಚಿದರು. ಇವರು ಮೊದಲ ವಿಕೆಟ್‌ಗೆ 59 ರನ್ ಸೇರಿಸಿದರು. ಮನ್ರೊ ಔಟಾದ ನಂತರ ಕ್ರೀಸ್‌ಗೆ ಬಂದ ಶ್ರೇಯಸ್ ಎದುರಾಳಿ ಬೌಲರ್‌ಗಳನ್ನು ದಂಡಿಸಿದರು.
ಸಂಕ್ಷಿಪ್ತ ಸ್ಕೋರು: ಡೆಲ್ಲಿ ಡೇರ್‌ಡೆವಿಲ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 219 (ಪೃಥ್ವಿ ಶಾ 62, ಕಾಲಿನ್ ಮನ್ರೊ 33,ಶ್ರೇಯಸ್ ಅಯ್ಯರ್ ಔಟಾಗದೆ 93, ಗ್ಲೆನ್ ಮ್ಯಾಕ್ಸ್‌ವೆಲ್ 27, ಪೀಯೂಷ್ ಚಾವ್ಲಾ 33ಕ್ಕೆ1, ಆ್ಯಂಡ್ರೆ ರಸೆಲ್ 28ಕ್ಕೆ1)
ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 164 (ಸುನಿಲ್ ನಾರಾಯಣ್ 26, ದಿನೇಶ್ ಕಾರ್ತಿಕ್ 18, ಶುಭಮನ್ ಗಿಲ್ 37, ಆ್ಯಂಡ್ರೆ ರಸೆಲ್ 44; ಟ್ರೆಂಟ್ ಬೌಲ್ಟ್ 44ಕ್ಕೆ2, ಗ್ಲೆನ್ ಮ್ಯಾಕ್ಸ್‌ವೆಲ್ 22ಕ್ಕೆ2, ಆವೇಶ್ ಖಾನ್ 29ಕ್ಕೆ2, ಅಮಿತ್ ಮಿಶ್ರಾ 23ಕ್ಕೆ2). ಫಲಿತಾಂಶ: ಡೆಲ್ಲಿ ಡೇರ್‌ಡೆವಿಲ್ಸ್‌ಗೆ 55ರನ್ ಗೆಲುವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.