ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಗಳನ್ನುಆಯೋಜಿಸುತ್ತಿರುವ ರಾಜ್ಯ ಸಂಸ್ಥೆಗಳಿಗೆ 600 ಹೆಚ್ಚುವರಿ ಉಚಿತ ಪಾಸ್‌ಗಳನ್ನು ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಮಂಜೂರು ಮಾಡಿದೆ.
ಬಿಸಿಸಿಐನ ಪಾಲಿನಿಂದ ಈ ಪಾಸ್‌ಗಳನ್ನು ಮಂಜೂರು ಮಾಡುವಂತೆ ಸೂಚಿಸಿದೆ. ಉಚಿತ ಪಾಸ್ ಹಂಚಿಕೆ ವಿಷಯದಲ್ಲಿ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಮತ್ತು ತಮಿಳುನಾಡು ಕ್ರಿಕೆಟ್ ಸಂಸ್ಥೆಗಳು ತಕರಾರು ಮಾಡಿದ್ದವು.
ಬಿಸಿಸಿಐನ ನೂತನ ನಿಯಮಾವಳಿ ಪ್ರಕಾರ ಕ್ರೀಡಾಂಗಣದ ಆಸನಗಳ ಸಾಮರ್ಥ್ಯದ ಶೇ.90ರಷ್ಟು ಟಿಕೆಟ್‌ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಬೇಕು. ಇನ್ನುಳಿದ ಶೇ.10ರಷ್ಟು ಟಿಕೆಟ್‌ಗಳನ್ನು ಉಚಿತ ಪಾಸ್‌ಗಳನ್ನಾಗಿ ನೀಡಬೇಕು. ಅದರಲ್ಲಿ ಶೇ 5ರಷ್ಟನ್ನು ಬಿಸಿಸಿಐ ತನ್ನ ಪ್ರಾಯೋಜಕರಿಗಾಗಿ ಮೀಸಲಿಟ್ಟಿದೆ. ಇದನ್ನು ಮಧ್ಯಪ್ರದೇಶ ಸಂಸ್ಥೆಯು ಒಪ್ಪಿರಲಿಲ್ಲ. ಆದ್ದರಿಂದ ಇಂದೋರ್‌ನಲ್ಲಿ ನಡೆಯಬೇಕಿದ್ದ ಭಾರತ- ವಿಂಡೀಸ್ ನಡುವಿನ ಪಂದ್ಯ ವಿಶಾಖಪಟ್ಟಣಕ್ಕೆ ಸ್ಥಳಾಂತರಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.