ಬೆಂಗಳೂರು: ಅಫ್ಗಾನಿಸ್ತಾನ ತಂಡವು ಭಾರತದ ಕ್ರಿಕೆಟ್ ತಂಡದ ಜತೆ ಟೆಸ್ಟ್ ಕ್ರಿಕೆಟ್‌ಗೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಪದಾರ್ಪಣೆ ಮಾಡಿದೆ. ಟಾಸ್ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ.
ಅಫ್ಗನ್ ತಂಡ ದುರ್ಬಲ ಎಂದು ಗೋಚರಿಸುತ್ತಿದ್ದರೂ, ಆ ತಂಡದಲ್ಲಿನ ಐವರು ಸ್ಪಿನ್ನರ್‌ಗಳನ್ನು ಎದುರಿಸಲು ಭಾರತದ ಬ್ಯಾಟ್ಸ್‌ಮನ್‌ಗಳು ಎಚ್ಚರ ವಹಿಸಬೇಕಿದೆ. ಸ್ಪಿನ್ನರ್‌ಗಳಾದ ಮಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ಜಹೀರ್ ಖಾನ್ ಮತ್ತು ಎಡಗೈ ಸ್ಪಿನ್ನರ್ ಅಮಿರ್ ಹಮ್ಜಾ ಆಡಿರುವ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ.
ಈ ಸ್ಪಿನ್ನರ್‌ಗಳಲ್ಲಿ ಕೆಲವರನ್ನು ಭಾರತೀಯ ಬ್ಯಾಟಿಂಗ್ ಪಡೆ ಐಪಿಎಲ್‌ನಲ್ಲಿ ಎದುರಿಸಿದೆ. ಹಾಗಾಗಿ ಸ್ಪಿನ್ನರ್‌ಗಳ ಕೈತಿರುವುಗಳ ಪರಿಚಯ ಇದೆ.
ಈ ಪಂದ್ಯದಲ್ಲಿ ಹೊಸ ಆಟಗಾರರಿಗೆ ಅವಕಾಶ ನೀಡಿರುವುದರಿಂದ ನಾಯಕ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲು ಹೆಚ್ಚು ಶ್ರಮವಹಿಸಬೇಕಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತಹ ಪ್ರಮುಖ ಆಟಗಾರರ ಸ್ಥಾನ ತುಂಬಿರುವ ಕರುಣ್ ನಾಯರ್, ದಿನೇಶ್ ಕಾರ್ತಿಕ್ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಈ ಟೆಸ್ಟ್ ವೇದಿಕೆಯಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎರಡು ತಂಡಕ್ಕೆಟ್ವಿಟರ್‌ನಲ್ಲಿ ಶುಭಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.