ADVERTISEMENT

ದೇವಧರ್ ಟ್ರೋಫಿ ಕ್ರಿಕೆಟ್: ನದೀಂ, ಮಾರ್ಕಂಡೆ ಮಿಂಚು ಭಾರತ ಬಿ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 17:04 IST
Last Updated 23 ಅಕ್ಟೋಬರ್ 2018, 17:04 IST
ಹನುಮವಿಹಾರಿ
ಹನುಮವಿಹಾರಿ   

ನವದೆಹಲಿ: ಶಾಬಾಜ್ ನದೀಂ (32ಕ್ಕೆ3) ಮತ್ತು ಮಯಂಕ್ ಮಾರ್ಕಂಡೆ (48ಕ್ಕೆ4) ಅವರ ಅಮೋಘ ಬೌಲಿಂಗ್‌ನಿಂದ ಭಾರತ ಬಿ ತಂಡವು ದೇವಧರ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಶುಭಾರಂಭ ಮಾಡಿತು.

ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವು ಹನುಮವಿಹಾರಿ (ಔಟಾಗದೆ 87) ಮತ್ತು ಮನೋಜ್ ತಿವಾರಿ (52ರನ್) ಅವರ ಅರ್ಧಶತಕಗಳ ಬಲದಿಂದ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 261 ರನ್‌ಗಳನ್ನು ಗಳಿಸಿತು. ಗುರಿ ಬೆನ್ನಟ್ಟಿದ ಎ ತಂಡವು ಆರಂಭದಲ್ಲಿ ಆಘಾತ ಅನುಭವಿಸಿತು. ಆದರೆ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ (99 ರನ್) ಉತ್ತಮವಾಗಿ ಆಡಿದರು. ಆದರೆ ಒಂದು ರನ್‌ ಅಂತರದಿಂದ ಶತಕ ತಪ್ಪಿಸಿಕೊಂಡರು. ಅಶ್ವಿನ್ ಅರ್ಧಶತಕ ಗಳಿಸಿದರು. ಆದರೆ ನದೀಂ ಮತ್ತು ಮಯಂಕ್ ಅವರ ಸ್ಪಿನ್ ಮೋಡಿಯ ಮುಂದೆ ಗೆಲುವಿನ ದಡ ಸೇರಲು ಎ ತಂಡಕ್ಕೆ ಸಾಧ್ಯವಾಗಲಿಲ್ಲ.

ಸಂಕ್ಷಿಪ್ತ ಸ್ಕೋರು: ಭಾರತ ‘ಬಿ’: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 261 (ಮಯಂಕ್ ಅಗರವಾಲ್ 46, ಶ್ರೇಯಸ್ ಅಯ್ಯರ್ 41, ಹನುಮವಿಹಾರಿ ಔಟಾಗದೆ 87, ಮನೋಜ್ ತಿವಾರಿ 52, ಆರ್. ಅಶ್ವಿನ್ 39ಕ್ಕೆ2), ಭಾರತ ‘ಎ’: 46.4 ಓವರ್‌ಗಳಲ್ಲಿ 218 (ಅನ್ಮೋಲ್‌ಪ್ರೀತ್ ಸಿಂಗ್ 16, ದಿನೇಶ್ ಕಾರ್ತಿಕ್ 99, ಆರ್. ಅಶ್ವಿನ್ 54, ಶಾಬಾಜ್ ನದೀಂ 32ಕ್ಕೆ3, ವರುಣ್ ಆ್ಯರನ್ 45ಕ್ಕೆ2, ಮಯಂಕ್ ಮಾರ್ಕಂಡೆ 48ಕ್ಕೆ4) ಫಲಿತಾಂಶ: ಭಾರತ ಬಿ ತಂಡಕ್ಕೆ 43 ರನ್‌ಗಳ ಜಯ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.