ADVERTISEMENT

ಧೋನಿ ವಿಶ್ವದ ಶ್ರೇಷ್ಠ ಫಿನಿಷರ್: ಚಾಪೆಲ್

ಪಿಟಿಐ
Published 20 ಜನವರಿ 2019, 17:22 IST
Last Updated 20 ಜನವರಿ 2019, 17:22 IST
ಮಹೇಂದ್ರಸಿಂಗ್ ಧೋನಿ
ಮಹೇಂದ್ರಸಿಂಗ್ ಧೋನಿ   

ನವದೆಹಲಿ: ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಮಹೇಂದ್ರಸಿಂಗ್ ಧೋನಿ ಇವತ್ತಿಗೂ ಶ್ರೇಷ್ಠ ಫಿನಿಷರ್ ಎಂದು ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಇಯಾನ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.

ಈಚೆಗೆ ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ಭಾರತ ಗೆದ್ದಿತ್ತು. ಆ ಸರಣಿಯ ಮೂರು ಪಂದ್ಯಗಳಲ್ಲಿಯೂ ಧೋನಿ ಅರ್ಧಶತಕ ಗಳಿಸಿದ್ದರು. ಅವರಿಗೆ ಸರಣಿಶ್ರೇಷ್ಠ ಗೌರವ ನೀಡಲಾಗಿತ್ತು.

‘ಇನಿಂಗ್ಸ್‌ ಅನ್ನು ಮುಕ್ತಾಯದ ಹಂತಕ್ಕೆ ತೆಗೆದುಕೊಂಡು ಹೋಗುವ ದಿಟ್ಟತನ ಧೋನಿಗೆ ಇರುವಷ್ಟು ಬೇರೆ ಯಾರಿಗೂ ಇಲ್ಲ. ಈ ಬಾರಿಯ ಪಂದ್ಯಗಳಲ್ಲಿ ಅವರು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡರು ಅನಿಸಿತ್ತು. ಆದರೆ ಒಂದೆರಡು ಉತ್ತಮವಾದ ಹೊಡೆತಗಳ ಮೂಲಕ ಪಂದ್ಯವನ್ನು ಭಾರತದ ಪರ ವಾಲುವಂತೆ ಮಾಡಿದರು’ ಎಂದು ಚಾಪೆಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಈ ಹಿಂದೆ ಆಸ್ಟ್ರೇಲಿಯಾಕ್ಕೆ ಮೈಕೆಲ್ ಬೆವನ್ ಅವರು ಪಂದ್ಯವನ್ನು ಬೌಂಡರಿ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುತ್ತಿದ್ದರು. ಆದರೆ, ಅದೇ ರೀತಿಯಲ್ಲಿ ಧೋನಿ ಸಿಕ್ಸರ್ ಹೊಡೆದು ಸಾಧಿಸುತ್ತಾರೆ. 37 ವರ್ಷದ ಧೋನಿ ವಿಕೆಟ್‌ನಲ್ಲಿ ಒಂದು ಮತ್ತು ಎರಡು ರನ್ ಗಳಿಸುವ ವೇಗ ಮತ್ತು ಚುರುಕುತನ ಅಸಾಧಾರಣವಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.