ಬೆಂಗಳೂರು: ಬುಧವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದ ಮನೀಷ್ ಪಾಂಡೆ ಗಳಿಸಿದ ಶತಕಕ್ಕೆ ಜಯ ಒಲಿಯಲಿಲ್ಲ. ಆದರೆ ವಿನಯಕುಮಾರ್ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ಛಲದ ಆಟಕ್ಕೆ ರೋಚಕ ಗೆಲುವು ಲಭಿಸಿತು.
ಮನೀಷ್ (ಔಟಾಗದೆ 102; 50ಎಸೆತ, 7ಬೌಂಡರಿ, 7ಸಿಕ್ಸರ್) ಶತಕದ ಬಲದಿಂದ ಬೆಳಗಾವಿ ಪ್ಯಾಂಥರ್ಸ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 180 ರನ್ ಗಳಿಸಿತು. ಗುರಿ ಬೆನ್ನತ್ತಿದ ಹುಬ್ಬಳ್ಳಿ ತಂಡವು ಮೊಹಮ್ಮದ್ ತಾಹ (75; 55ಎಸೆತ, 4ಬೌಂಡರಿ, 5ಸಿಕ್ಸರ್) ಅವರ ಬ್ಯಾಟಿಂಗ್ ಬಲದಿಂದ 19.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 181 ರನ್ ಗಳಿಸಿತು. ಟೂರ್ನಿಯಲ್ಲಿ ಹುಬ್ಬಳ್ಳಿಗೆ ಇದು ಮೊದಲ ಜಯ.
ಟಾಸ್ ಗೆದ್ದ ಹುಬ್ಬಳ್ಳಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ತಂಡದ ಬೌಲರ್‌ಗಳು ಬೆಳಗಾವಿಗೆ ಆರಂಭದಲ್ಲಿಯೇ ಆಘಾತ ನೀಡಿದರು. ಕೇವಲ 42 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಆದರೆ, ಮನೀಷ್ ಏಕಾಂಗಿ ಹೋರಾಟ ಮಾಡಿದರು. ಅದರಿಂದಾಗಿ ತಂಡವು ಸವಾಲಿನ ಮೊತ್ತ ಪೇರಿಸಿತು. ಹುಬ್ಬಳ್ಳಿಯ ತಾಹ, ಲವನೀತ್ ಸಿಸೋಡಿಯಾ ಮತ್ತು ಪ್ರವೀಣ ದುಬೆ ಅವರ ಛಲದ ಆಟ ರಂಗೇರಿತು.
ಸಂಕ್ಷಿಪ್ತ ಸ್ಕೋರು: ಬೆಳಗಾವಿ ಪ್ಯಾಂಥರ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 180 (ಸ್ಟಾಲಿನ್ ಹೂವರ್ 19, ಶುಭಾಂಗ್ ಹೆಗಡೆ 18, ಮನೀಷ್ ಪಾಂಡೆ ಔಟಾಗದೆ 102, ಮೀರ್ ಕೌನೇನ್ ಅಬ್ಬಾಸ್ 18, ಆರ್ಷದೀಪ್ ಸಿಂಗ್ ಬ್ರಾರ್ 11, ಮಿತ್ರಕಾಂತ್ ಯಾದವ್ 37ಕ್ಕೆ1, ವಿದ್ಯಾಧರ್ ಪಾಟೀಲ 41ಕ್ಕೆ2, ಆದಿತ್ಯ ಸೋಮಣ್ಣ 17ಕ್ಕೆ1, ಪ್ರವೀಣ ದುಬೆ 19ಕ್ಕೆ1, ಡೇವಿಡ್ ಮಥಾಯಿಸ್ 18ಕ್ಕೆ2) ಹುಬ್ಬಳ್ಳಿ ಟೈಗರ್ಸ್: 19.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 181 (ಮೊಹಮ್ಮದ್ ತಾಹ 75, ಲವನೀತ್ ಸಿಸೋಡಿಯಾ 29, ಶಿಶಿರ್ ಭವಾನೆ 12, ಕೆ.ಬಿ. ಪವನ್ 22, ಪ್ರವೀಣ್ ದುಬೆ 33, ಸ್ಟಾಲಿನ್ ಹೂವರ್ 35ಕ್ಕೆ2, ಡಿ. ಅವಿನಾಶ್ 33ಕ್ಕೆ1, ಶುಭಾಂಗ್ ಹೆಗಡೆ 23ಕ್ಕೆ1) ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್ ಗೆ 5 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಮನೀಷ್ ಪಾಂಡೆ (ಪ್ಯಾಂಥರ್ಸ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.