ಹುಬ್ಬಳ್ಳಿ: ಕೆಪಿಎಲ್‌ನಲ್ಲಿ ಆಡುವ ಬಿಜಾಪುರ ಬುಲ್ಸ್ ತಂಡವು ಧಾರವಾಡದ ಮಮತಾ ಸ್ಕೂಲ್ ಫಾರ್ ಚಿಲ್ಡ್ರನ್ಸ್ ವಿತ್ ಸ್ಪೆಷಲ್ ನೀಡ್ಸ್ ಅನಾಥ ಮಕ್ಕಳ ಶಾಲೆಯ 11 ಬುದ್ಧಿಮಾಂದ್ಯ ಮಕ್ಕಳನ್ನು ದತ್ತು ಪಡೆದಿದೆ. ಒಂದು ವರ್ಷ ಅವರ ಎಲ್ಲ ವೆಚ್ಚವನ್ನು ಭರಿಸಲಿದೆ.
ಬುಲ್ಸ್ ತಂಡದ ಆಟಗಾರರು ಹಾಗೂ ಸಿಬ್ಬಂದಿ ನಗರದ ತಕ್ಷಶಿಲಾ ಅಕಾಡೆಮಿ ಸಹಯೋಗದಲ್ಲಿ ಗುರುವಾರ ಹುಬ್ಬಳ್ಳಿಯಲ್ಲಿ ‘ಅನಾಥ ಮಕ್ಕಳಿಗಾಗಿ ಸ್ಫೂರ್ತಿ’ ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಆಟಗಾರರು ಮಕ್ಕಳ ಜೊತೆ ಬೆರೆತು ಸಂಭ್ರಮಿಸಿ, ಹೆಜ್ಜೆ ಹಾಕಿದರು. ಅವರೊಂದಿಗೆ ಊಟ ಮಾಡಿದರು. ಸಾಧನೆಗೆ ಸ್ಫೂರ್ತಿಯಾಗುವ ಮಾತು ಗಳನ್ನು ಹೇಳಿದರು.
ಬುಲ್ಸ್ ತಂಡದ ಮಾಲೀಕ ಕಿರಣ ಕಟ್ಟಿಮನಿ ‘ವಿಶೇಷ ಮಕ್ಕಳ ಜೊತೆ ಕಳೆದ ಪ್ರತಿ ನಿಮಿಷವೂ ಸದಾ ನೆನಪಿನಲ್ಲಿ ಉಳಿ ಯುವಂಥದ್ದು, ಒಂದು ವರ್ಷದ ತನಕ ಮಕ್ಕಳ ಎಲ್ಲ ವೆಚ್ಚವನ್ನು ಬುಲ್ಸ್ ತಂಡ ಭರಿಸಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.