ಪೊಚೆಸ್ಸ್ಟ್ರೂಮ್, ದಕ್ಷಿಣ ಆಫ್ರಿಕಾ (ಪಿಟಿಐ): ಜೀನ್ ಡುಪ್ಲೆಸಿ ಅವರ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ಎ ತಂಡವು ಮಂಗಳವಾರ ಇಲ್ಲಿ ನಡೆದ ‘ಟೆಸ್ಟ್’ ಪಂದ್ಯದಲ್ಲಿ ಭಾರತ ಎ ತಂಡದ ಎದುರು ಉತ್ತಮ ಮೊತ್ತ ಗಳಿಸಿತು.
ಎರಡನೇ ದಿನದಾಟದ ಕೊನೆಗೆ 92 ಓವರ್ಗಳಲ್ಲಿ 5 ವಿಕೆಟ್ಗಳಿಗೆ 298 ರನ್ ಗಳಿಸಿತು. ಪಂದ್ಯದ ಮೊದಲ ದಿನವು ಮಳೆಗಾಹುತಿಯಾಗಿತ್ತು. ಆತಿಥೇಯ ತಂಡದ ರುಬಿನ್ ಹರ್ಮನ್ 95 ರನ್ ಗಳಿಸಿದರು. ಜೀನ್ (ಬ್ಯಾಟಿಂಗ್ 103; 207ಎ, 4X8, 6X1) ಶತಕ ಗಳಿಸಿದರು.
ಭಾರತ ಎ ತಂಡದಲ್ಲಿ ಪದಾರ್ಪಣೆ ಮಾಡಿದ ಕರ್ನಾಟಕದ ವೇಗಿ ವಿದ್ವತ್ ಕಾವೇರಪ್ಪ ಅವರು ಇನಿಂಗ್ಸ್ನ ಎರಡನೇ ಓವರ್ನಲ್ಲಿಯೇ ಆರಂಭಿಕ ಬ್ಯಾಟರ್ ಕ್ಯಾಮರಾನ್ ಡೀನ್ ಶೇಕ್ಲೆಟನ್ ಅವರ ವಿಕೆಟ್ ಗಳಿಸಿದರು. ಸೌರಭ್ ಕುಮಾರ್ ಮೂರು ವಿಕೆಟ್ ಗಳಿಸಿದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ ಎ: 92 ಓವರ್ಗಳಲ್ಲಿ 5 ವಿಕೆಟ್ಗಳಿಗೆ 298 (ರುಬಿನ್ ಹರ್ಮನ್ 95, ಜೀನ್ ಡುಪ್ಲೆಸಿ ಬ್ಯಾಟಿಂಗ್ 103, ಸೌರಭ್ ಕುಮಾರ್ 83ಕ್ಕೆ3)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.