ADVERTISEMENT

ಐಸಿಸಿ ವಾರ್ಷಿಕ ಪ್ರಶಸ್ತಿ ರೇಸ್‌ನಲ್ಲಿ ಸೂರ್ಯ, ಯಶಸ್ವಿ

ಪಿಟಿಐ
Published 3 ಜನವರಿ 2024, 13:56 IST
Last Updated 3 ಜನವರಿ 2024, 13:56 IST
ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್    

ದುಬೈ: ಭಾರತ ಕ್ರಿಕೆಟ್ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಈ ವರ್ಷದ ಐಸಿಸಿ ವರ್ಷದ  ಟಿ20 ಕ್ರಿಕೆಟಿಗ ಪ್ರಶಸ್ತಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

2022ರಲ್ಲಿಯೂ ಅವರು ವರ್ಷದ ಕ್ರಿಕೆಟಿಗ ಪ್ರಶಸ್ತಿ ಜಯಿಸಿದ್ದರು. ಇದೀಗ ಈ ವರ್ಷವೂ ಪೈಪೋಟಿಯಲ್ಲಿದ್ದಾರೆ. 17 ಪಂದ್ಯಗಳಿಂದ 733 ರನ್‌ಗಳನ್ನು ಗಳಿಸಿದ್ದಾರೆ. 33 ವರ್ಷದ ಸೂರ್ಯ  155.95ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ.

ಸೂರ್ಯ ಅವರು ಈಚೆಗೆ ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು.

ADVERTISEMENT

ಈ ವಿಭಾಗದಲ್ಲಿ ಸಿಕಂದರ್ ರಝಾ (ಜಿಂಬಾಬ್ವೆ), ಅಲ್ಪೇಶ್ ರಾಮಜಾನಿ (ಉಗಾಂಡ) ಹಾಗೂ ಮಾರ್ಕ್ ಚಾಪ್‌ಮನ್ (ನ್ಯೂಜಿಲೆಂಡ್) ಸ್ಪರ್ಧೆಯಲ್ಲಿದ್ದಾರೆ.

ಭಾರತದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು  ಉದಯೋನ್ಮುಖ ಕ್ರಿಕೆಟರ್ ವಿಭಾಗದಲ್ಲಿ ನಾಮನಿರ್ದೇಶನ ಮಾಡಲಾಗಿದೆ. ಈ ವಿಭಾಗದಲ್ಲಿ ನಾಲ್ವರು ಆಟಗಾರರು ನಾಮನಿರ್ದೇಶನಗೊಂಡಿದ್ದಾರೆ.

22 ವರ್ಷದ ಯಶಸ್ವಿ ಟೆಸ್ಟ್‌ನಲ್ಲಿ 283 ಮತ್ತು ಟಿ20 ಮಾದರಿಯಲ್ಲಿ 430 ರನ್‌ ಗಳಿಸಿದ್ದಾರೆ. ಚುಟುಕು ಮಾದರಿಯಲ್ಲಿ ಅವರು 159.25ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ.

ಅವರ ವಿಭಾಗದಲ್ಲಿ ನ್ಯೂಜಿಲೆಂಡ್ ತಂಡದ ರಚಿನ್ ರವೀಂದ್ರ, ದಕ್ಷಿಣ ಆಫ್ರಿಕಾದ ಜೆರಾಲ್ಡ್ ಕೊಟೆಯೆ ಮತ್ತು ಶ್ರೀಲಂಕಾದ ದಿಲ್ಶಾನ್ ಮಧುಶಂಕಾ ಸ್ಪರ್ಧೆಯಲ್ಲಿದ್ಧಾರೆ.

ಯಶಸ್ವಿ ಜೈಸ್ವಾಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.