ಸಿಡ್ನಿ: ಕೊನೆಯ (112ನೇ) ಟೆಸ್ಟ್ ಆಡುತ್ತಿರುವ ಡೇವಿಡ್ ವಾರ್ನರ್ ಅವರು ಕಳೆದುಹೋಗಿದ್ದ ತಮ್ಮ ‘ಬ್ಯಾಗಿ’ ಕ್ಯಾಪ್‌ಗಳನ್ನು ಶುಕ್ರವಾರ ಮರಳಿ ಪಡೆದಿದ್ದು, ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.
ಮೆಲ್ಬರ್ನ್‌ನಿಂದ ಸಿಡ್ನಿಗೆ ತಂಡದೊಡನೆ ವಿಮಾನದಲ್ಲಿ ಪಯಾಣಿಸಿದ ನಂತರ ಅವರ ಕ್ಯಾಪ್‌ಗಳಿದ್ದ ಬ್ಯಾಗ್ ಕಾಣೆಯಾಗಿತ್ತು. ಈ ಬಗ್ಗೆ 37 ವರ್ಷದ ಆಟಗಾರ, ಸಾರ್ವಜನಿಕವಾಗಿ ಮನವಿ ಮಾಡಿ ‘ಕ್ಯಾಪ್‌ಗಳನ್ನು ಮರಳಿಸಿ. ಬ್ಯಾಗ್‌ಗಳನ್ನು ಬೇಕಾದರೆ ಇಟ್ಟುಕೊಳ್ಳಿ’ ಎಂದು ಮನವಿ ಮಾಡಿದ್ದರು.
ತಮ್ಮ ಎರಡು ಬ್ಯಾಗಿ ಗ್ರೀನ್ ಟೋಪಿಗಳು ದೊರಕಿವೆ ಎಂದು ವಾರ್ನರ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ. ‘ಎಲ್ಲರಿಗೂ ಹಾಯ್, ನನ್ನ ಬ್ಯಾಗಿ ಗ್ರೀನ್ ಕ್ಯಾಪ್‌ಗಳು ಪತ್ತೆಯಾಗಿವೆ. ಭಾರ ಇಳಿದಿದೆ. ನಾನು ನಿರಾಳನಾಗಿದ್ದೇನೆ’ ಎಂದಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಹೇಳಿಕೆ ಬಿಡುಗಡೆ ಮಾಡಿ ಕ್ಯಾಪ್‌ಗಳು ಪತ್ತೆಯಾಗಿರುವುದನ್ನು ತಿಳಿಸಿದೆ.
ತಮ್ಮ ವೃತ್ತಿ ಜೀವನದುದ್ದಕ್ಕೂ ಬ್ಯಾಗಿ ಗ್ರೀನ್ ಕ್ಯಾಪ್ ಧರಿಸುವುದನ್ನು ಪ್ರತಿಷ್ಠೆಯ ಸಂಕೇತ ಎಂದು ಕ್ರಿಕೆಟಿಗರು ಭಾವಿಸುತ್ತಾರೆ. ಅವು ಹರಿದರೂ ಅವುಗಳನ್ನು ಇಟ್ಟುಕೊಂಡಿರುತ್ತಾರೆ.
ಕ್ಯಾಪ್‌ಗಳಿದ್ದ ಬ್ಯಾಗ್ ಸಿಡ್ನಿಯ ಹೋಟೆಲ್‌ನಲ್ಲಿ ಹೇಗೆ ಕಾಣೆಯಾಗಿತ್ತೊ ಅದೇ ಸ್ಥಿತಿಯಲ್ಲಿ ಎಲ್ಲ ವಸ್ತುಗಳ ಸಹಿತ ಪತ್ತೆಯಾಗಿದೆ. ಇದಕ್ಕೆ ಮೊದಲು ಮಂಗಳವಾರದಿಂದ ತೀವ್ರ ಶೋಧದ ಹೊರತಾಗಿಯೂ ಅವುಗಳು ಕಣ್ಣಿಗೆ ಬಿದ್ದಿರಲಿಲ್ಲ.
ಆಸ್ಟ್ರೇಲಿಯಾದ ಮಹಾನ್ ಆರಂಭ ಆಟಗಾರರಲ್ಲಿ ಒಬ್ಬರಾಗಿರುವ ವಾರ್ನರ್ 2011ರಲ್ಲಿ ಟೆಸ್ಟ್ ಪದಾರ್ಪಣೆ ನಂತರ 26 ಶತಕಗಳ ಸಹಿತ 8,729 ರನ್ ಗಳಿಸಿದ್ದಾರೆ. ಸರಾಸರಿ 44.53
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.