ADVERTISEMENT

ರಣಜಿ ಟ್ರೋಫಿ ಕ್ರಿಕೆಟ್‌ ‘ಸಿ’ ಗುಂಪಿನ ಪಂದ್ಯದಲ್ಲಿ ಪಂಜಾಬ್‌ಗೆ ಮಹತ್ವದ ಮುನ್ನಡೆ

ಪಿಟಿಐ
Published 19 ಅಕ್ಟೋಬರ್ 2024, 23:11 IST
Last Updated 19 ಅಕ್ಟೋಬರ್ 2024, 23:11 IST
<div class="paragraphs"><p>ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)</p></div>

ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)

   

ಮುಲ್ಲನಪುರ (ಪಂಜಾಬ್‌): ಬೌಲರ್‌ಗಳ ಉತ್ತಮ ಪ್ರದರ್ಶನದಿಂದ ಪಂಜಾಬ್‌ ತಂಡ ರಣಜಿ ಟ್ರೋಫಿ ಕ್ರಿಕೆಟ್‌ ‘ಸಿ’ ಗುಂಪಿನ ಪಂದ್ಯದ ಮೂರನೇ ದಿನವಾದ ಶನಿವಾರ ಮಧ್ಯಪ್ರದೇಶ ವಿರುದ್ಧ 70 ರನ್‌ಗಳ ಮಹತ್ವದ ಮುನ್ನಡೆ ಪಡೆಯಿತು.

ಪಂಜಾಬ್‌ ತಂಡದ (ಶುಕ್ರವಾರ: 7 ವಿಕೆಟ್‌ಗೆ 254) 277 ರನ್‌ಗಳಿಗೆ ಉತ್ತರವಾಗಿ ಮಧ್ಯಪ್ರದೇಶ 207 ರನ್‌ಗಳಿಗೆ ಆಲೌಟ್‌ ಆಯಿತು. ಮಧ್ಯಮ ಕ್ರಮಾಂಕದಲ್ಲಿ ನಾಯಕ ಶುಭಂ ಶರ್ಮಾ 61 ರನ್ (101ಎ) ಗಳಿಸಿದರೆ, ಭಾರತ ತಂಡದ ಆಟಗಾರ ರಜತ್ ಪಾಟೀದಾರ್ 90 ರನ್ (178 ಎ) ಹೊಡೆದರು. ವೇಗಿ ಗುರನೂರ್‌ ಬ್ರಾರ್ 3 ವಿಕೆಟ್ ಪಡೆದರೆ, ಸ್ಪಿನ್ನರ್‌ಗಳಾದ ಮಯಂಕ್ ಮಾರ್ಕಂಡೆ, ಸುಖ್ವಿಂದರ್ ಸಿಂಗ್ ಮತ್ತು ನಮನ್‌ ಧೀರ್ ತಲಾ 2 ವಿಕೆಟ್ ಪಡೆದರು.

ADVERTISEMENT

ಸ್ಕೋರುಗಳು: ಮೊದಲ ಇನಿಂಗ್ಸ್‌: ಪಂಜಾಬ್:95.5 ಓವರುಗಳಲ್ಲಿ 277 (ಸಲೀಲ್ ಅರೋರಾ 101, ಸುಖ್ವಿಂದರ್ ಸಿಂಗ್‌ 66; ಕುಲವಂತ್‌ ಖೆಜ್ರೋಲಿಯಾ 58ಕ್ಕೆ3); ಮಧ್ಯಪ್ರದೇಶ: 73.5 ಓವರುಗಳಲ್ಲಿ 207
(ಶುಭಂ ಶರ್ಮಾ 61, ರಜತ್ ಪಾಟೀದಾರ್ 90; ಗುರನೂರ್‌ ಬ್ರಾರ್
36ಕ್ಕೆ3, ಮಯಂಕ್ ಮಾರ್ಕಂಡೆ 46ಕ್ಕೆ2, ಸುಖ್ವಿಂದರ್ ಸಿಂಗ್ 47ಕ್ಕೆ2, ನಮನ್‌ ಧೀರ್ 5ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.