ಮುಂಬೈ: ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಆ್ಯರನ್ ಫಿಂಚ್, ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಒಂಬತ್ತು ತಂಡಗಳನ್ನು ಪ್ರತಿನಿಧಿಸಿದ್ದಾರೆ.
ಐಪಿಎಲ್ 2022ನೇ ಆವೃತ್ತಿಯಲ್ಲಿ ಫಿಂಚ್, ಕೋಲ್ಕತ್ತ ನೈಟ್ ರೈಡರ್ಸ್ ತಂಡದ ತೆಕ್ಕೆಗೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಒಂಬತ್ತು ತಂಡಗಳ ಪರ ಆಡಲು ಸಾಧ್ಯವಾಗಿದೆ.
ಆದರೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 7 ರನ್ನಿಗೆ ಔಟ್ ಆಗುವ ಮೂಲಕ ಫಿಂಚ್ ನಿರಾಸೆ ಮೂಡಿಸಿದ್ದಾರೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಫಿಂಚ್ ಮಾರಾಟವಾಗಿರಲಿಲ್ಲ. ಆದರೆ ಅಲೆಕ್ಸ್ ಹೇಲ್ಸ್ ಟೂರ್ನಿಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ₹1.5 ಕೋಟಿ ಮೊತ್ತಕ್ಕೆ ಫಿಂಚ್, ಕೆಕೆಆರ್ ತಂಡದ ಪಾಲಾಗಿದ್ದರು.
2020ನೇ ಸಾಲಿನಲ್ಲಿ ಫಿಂಚ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು.
ಆ್ಯರನ್ ಫಿಂಚ್ ಪ್ರತಿನಿಧಿಸಿದ ಐಪಿಎಲ್ ತಂಡಗಳ ಪಟ್ಟಿ ಇಂತಿದೆ:
2010: ರಾಜಸ್ಥಾನ್ ರಾಯಲ್ಸ್
2011-12: ಡೆಲ್ಲಿ ಡೇರ್‌ಡೆವಿಲ್ಸ್
2013: ಪುಣೆ ವಾರಿಯರ್ಸ್ ಇಂಡಿಯಾ
2014: ಸನ್‌ರೈಸರ್ಸ್ ಹೈದರಾಬಾದ್
2015: ಮುಂಬೈ ಇಂಡಿಯನ್ಸ್
2016-17: ಗುಜರಾತ್ ಲಯನ್ಸ್
2018: ಕಿಂಗ್ಸ್ ಇಲೆವೆನ್ ಪಂಜಾಬ್
2020: ರಾಯಲ್ ಚಾಲೆಂಜರ್ಸ್ ಬೆಂಗಳೂರು
2022: ಕೋಲ್ಕತ್ತ ನೈಟ್ ರೈಡರ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.