ADVERTISEMENT

ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಫ್ಗನ್ ಕ್ರಿಕೆಟರ್ ರಶೀದ್ ಖಾನ್: ಅದ್ಧೂರಿ ಮದುವೆ

ಖ್ಯಾತ ಕ್ರಿಕೆಟ್ ಆಟಗಾರ, ಅಫ್ಗಾನಿಸ್ತಾನದ ಅತ್ಯುತ್ತಮ ಸ್ಪಿನ್ ಬೌಲರ್ ಎಂದು ಹೆಸರಾದ ರಶೀದ್ ಖಾನ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2024, 4:50 IST
Last Updated 4 ಅಕ್ಟೋಬರ್ 2024, 4:50 IST
<div class="paragraphs"><p>ರಶೀದ್ ಖಾನ್, ಎಡದಿಂದ ಎರಡನೇಯವರು</p></div>

ರಶೀದ್ ಖಾನ್, ಎಡದಿಂದ ಎರಡನೇಯವರು

   

ಬೆಂಗಳೂರು: ಖ್ಯಾತ ಕ್ರಿಕೆಟ್ ಆಟಗಾರ, ಅಫ್ಗಾನಿಸ್ತಾನದ ಅತ್ಯುತ್ತಮ ಸ್ಪಿನ್ ಬೌಲರ್ ಎಂದು ಹೆಸರಾದ ರಶೀದ್ ಖಾನ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಕ್ಟೋಬರ್ 3 ರಂದು ಕಾಬೂಲ್‌ನ ಇಂಪೀರಿಯಲ್ ಕಾಂಟಿನೆಂಟಲ್ ಹೋಟೆಲ್‌ನಲ್ಲಿ ಅಫ್ಗಾನಿಸ್ತಾನದ ಸಂಪ್ರದಾಯದ ಪ್ರಕಾರ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.

ADVERTISEMENT

ಈ ವೇಳೆ ಅಫ್ಗಾನಿಸ್ತಾನ ನ್ಯಾಷನಲ್ ಕ್ರಿಕೆಟ್ ಟೀಂ ಆಟಗಾರರು, ಗಣ್ಯರು ಹಾಜರಿದ್ದು ಶುಭ ಕೋರಿದ್ದಾರೆ.

ವಿಶೇಷವೆಂದರೆ ಇದೇ ವೇಳೆ ರಶೀದ್ ಖಾನ್ ಅವರ ಜೊತೆಯೇ ರಶೀದ್ ಅವರ ಸಹೋದರ ಜಖೀವುಲ್ಲಾ ಖಾನ್ ಹಾಗೂ ಇಬ್ಬರು ಸೋದರಳಿಯರು ಮದುವೆಯಾಗಿದ್ದಾರೆ. ಒಂದೇ ವೇದಿಕೆಯಲ್ಲಿ ನಾಲ್ವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಫ್ಗಾನಿಸ್ತಾನ ಕ್ರಿಕೆಟ್ ಅಸೋಸಿಯೇಷನ್ ಮದುವೆಯ ಫೋಟೊಗಳನ್ನು ಹಂಚಿಕೊಂಡು ಎಕ್ಸ್‌ನಲ್ಲಿ ಶುಭಕೋರಿದೆ.

ರಶೀದ್ ಖಾನ್ ಒಬ್ಬ ಅತ್ಯುತ್ತಮ ಬೌಲರ್ ಅಷ್ಟೇ ಅಲ್ಲದೇ ಅತ್ಯುತ್ತಮ ಆಲ್ ರೌಂಡರ್ ಎಂದು ಹೆಸರಾಗಿದ್ದು ಅವರು ಅಫ್ಗಾನಿಸ್ತಾನದಲ್ಲಿ ಕ್ರಿಕೆಟ್‌ ಜನಪ್ರಿಯ ಆಗಲು ಕಾರಣರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.