ADVERTISEMENT

ರಶೀದ್‌ ಖಾನ್‌ ಮೋಡಿ: ಬಾಂಗ್ಲಾದೇಶದ ವಿರುದ್ಧ ಅಫ್ಗಾನಿಸ್ತಾನಕ್ಕೆ ಜಯ

ಪಿಟಿಐ
Published 20 ಸೆಪ್ಟೆಂಬರ್ 2018, 20:25 IST
Last Updated 20 ಸೆಪ್ಟೆಂಬರ್ 2018, 20:25 IST
ರಶೀದ್‌ ಖಾನ್‌
ರಶೀದ್‌ ಖಾನ್‌   

ಅಬುಧಾಬಿ: ರಶೀದ್‌ ಖಾನ್‌ (ಔಟಾಗದೆ 57; 32ಎ, 8ಬೌಂ, 1ಸಿ) ಮತ್ತು (13ಕ್ಕೆ2) ಗುರುವಾರ ಶೇಖ್‌ ಜಾಯೆದ್‌ ಕ್ರೀಡಾಂಗಣದಲ್ಲಿ ಆಲ್‌ರೌಂಡ್‌ ಆಟ ಆಡಿ ತಮ್ಮ ಜನ್ಮದಿನವನ್ನು ಸ್ಮರಣೀಯವಾಗಿಸಿಕೊಂಡರು.

ಅವರ ಅಪೂರ್ವ ಸಾಮರ್ಥ್ಯದ ಬಲದಿಂದ ಅಫ್ಗಾನಿಸ್ತಾನ ತಂಡ ಬಾಂಗ್ಲಾದೇಶ ಎದುರಿನ ಏಷ್ಯಾಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 136ರನ್‌ಗಳಿಂದ ಜಯಭೇರಿ ಮೊಳಗಿಸಿತು.

ಮೊದಲು ಬ್ಯಾಟ್‌ ಮಾಡಿದ ಅಸ್ಗರ್‌ ಅಫ್ಗನ್‌ ಬಳಗ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 255ರನ್‌ ದಾಖಲಿಸಿತು.

ADVERTISEMENT

ಸವಾಲಿನ ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡ 42.1 ಓವರ್‌ಗಳಲ್ಲಿ 119ರನ್‌ಗಳಿಗೆ ಆಲೌಟ್‌ ಆಯಿತು. ಶಕೀಬ್‌ ಅಲ್‌ ಹಸನ್‌ (32; 55ಎ), ಮಹಮದುಲ್ಲಾ (27; 54ಎ, 2ಬೌಂ) ಮತ್ತು ಮೊಸಾದೆಕ್‌ ಹೊಸೇನ್‌ (ಔಟಾಗದೆ 26; 60ಎ, 3ಬೌಂ) ಅವರು ತಾಳ್ಮೆಯ ಆಟ ಆಡಿದರು. ಆದರೆ ಇತರ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು. ಹೀಗಾಗಿ ತಂಡದ ಗೆಲುವಿನ ಕನಸು ಕಮರಿತು.

ಸಂಕ್ಷಿಪ್ತ ಸ್ಕೋರ್‌

ಅಫ್ಗಾನಿಸ್ತಾನ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 255 (ಮೊಹಮ್ಮದ್‌ ಶಹಜಾದ್‌ 37, ರಹಮತ್‌ ಶಾ 10, ಹಸಮತುಲ್ಲಾ ಶಾಹಿದಿ 58, ಸಮಿವುಲ್ಲಾ ಶೆನ್ವಾರಿ 18, ಮೊಹಮ್ಮದ್‌ ನಬಿ 10, ಗುಲ್ಬದಿನ್‌ ನೈಬ್‌ ಔಟಾಗದೆ 42, ರಶೀದ್‌ ಖಾನ್‌ ಔಟಾಗದೆ 57; ರುಬೆಲ್‌ ಹೊಸೇನ್‌ 32ಕ್ಕೆ1, ಅಬು ಹೈದರ್‌ ರೋನಿ 50ಕ್ಕೆ2, ಶಕೀಬ್‌ ಅಲ್‌ ಹಸನ್‌ 42ಕ್ಕೆ4).

ಬಾಂಗ್ಲಾದೇಶ: 42.1 ಓವರ್‌ಗಳಲ್ಲಿ 119 (ಲಿಟನ್‌ ದಾಸ್‌ 6, ಶಕೀಬ್‌ ಅಲ್‌ ಹಸನ್‌ 32, ಮಹಮದುಲ್ಲಾ 27, ಮೊಸಾದೆಕ್‌ ಹೊಸೇನ್‌ ಔಟಾಗದೆ 26; ಅಫ್ತಾಬ್‌ ಆಲಂ 11ಕ್ಕೆ1, ಮುಜೀಬ್‌ ಉರ್‌ ರಹಮಾನ್‌ 22ಕ್ಕೆ2, ಗುಲ್ಬದಿನ್‌ ನೈಬ್‌ 30ಕ್ಕೆ2, ಮೊಹಮ್ಮದ್‌ ನಬಿ 24ಕ್ಕೆ1, ರಶೀದ್‌ ಖಾನ್‌ 13ಕ್ಕೆ2, ರಹಮತ್‌ ಶಾ 7ಕ್ಕೆ1).

ಫಲಿತಾಂಶ: ಅಫ್ಗಾನಿಸ್ತಾನ ತಂಡಕ್ಕೆ 136ರನ್‌ ಗೆಲುವು.

ಪಂದ್ಯಶ್ರೇಷ್ಠ: ರಶೀದ್‌ ಖಾನ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.