ವೆಲ್ಲಿಂಗ್ಟನ್: ಭಾರತ ಮೂಲದ ಸ್ಪಿನ್ ಬೌಲರ್ ಇಜಾಜ್ ಪಟೇಲ್ ಅವರು ನ್ಯೂಜಿಲೆಂಡ್‌ನ ಟೆಸ್ಟ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.
ಅಕ್ಟೋಬರ್‌ನಲ್ಲಿ ಯುಎಇನಲ್ಲಿ ಪಾಕಿಸ್ತಾನ ವಿರುದ್ದ ನಡೆಯುವ ಮೂರು ಪಂದ್ಯಗಳ ಸರಣಿಗೆ ನ್ಯೂಜಿಲೆಂಡ್ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ.
‘ಗಾಯಗೊಂಡಿರುವ ಮಿಶೆಲ್ ಸಾಂಟ್ನರ್ ಅವರ ಬದಲಿಗೆ ಇಜಾಜ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ದೇಶಿ ಕ್ರಿಕೆಟ್‌ನಲ್ಲಿ ಅವರು ಅಮೋಘ ಸಾಮರ್ಥ್ಯ ತೋರಿದ್ದಾರೆ’ ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ ಗೆವಿನ್ ಲಾರ್ಸೆನ್ ಹೇಳಿದ್ದಾರೆ.
29 ವರ್ಷದ ಇಜಾಜ್ ಅವರು ಹುಟ್ಟಿದ್ದು ಮುಂಬೈನಲ್ಲಿ. ಆದರೆ, ಬೆಳೆದಿದ್ದು ನ್ಯೂಜಿಲೆಂಡ್‌ನಲ್ಲಿ. ಹಲವು ವರ್ಷಗಳಿಂದ ಇಲ್ಲಿನ ದೇಶಿ ಕ್ರಿಕೆಟ್ ತಂಡದಲ್ಲಿ ಅವರು ಆಡುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಪ್ಲಂಕೆಟ್ ಶೀಲ್ಡ್ ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಕಬಳಿಸಿದ ಹಿರಿಮೆಗೆ ಈ ಸ್ಪಿನ್ನರ್ ಪಾತ್ರರಾಗಿದ್ದಾರೆ.
ಸೆಂಟ್ರಲ್ ಟ್ಯಾಗ್ಸ್ ಕ್ರಿಕೆಟ್ ತಂಡದ ಪರವಾಗಿ ಆಡುವ ಅವರು ಈ ಋತುವಿನಲ್ಲಿ 21.52ರ ಸರಾಸರಿಯಲ್ಲಿ 48 ವಿಕೆಟ್‌ಗಳನ್ನು ಪಡೆದಿದ್ದಾರೆ.
ತಂಡ ಇಂತಿದೆ: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಎಸಲ್, ಟಾಮ್ ಬ್ಲಂಡೆಲ್, ಟ್ರೆಂಟ್ ಬೋಲ್ಟ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮ್ಯಾಟ್ ಹೆನ್ರಿ, ಟಾಮ್ ಲಾಥಮ್, ಹೆನ್ರಿ ನಿಕೊಲಾಸ್, ಇಜಾಜ್ ಪಟೇಲ್, ಜೀತ್ ರಾವಲ್, ಇಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವಾಗ್ನರ್, ಬಿ. ಜೆ. ವಾಟ್ಲಿಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.