ADVERTISEMENT

ಸಿಪಿಎಲ್‌ನಲ್ಲಿ ಆಡಲಿದ್ದಾರೆ ರಾಯುಡು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2023, 13:47 IST
Last Updated 11 ಆಗಸ್ಟ್ 2023, 13:47 IST
ಅಂಬಾಟಿ ರಾಯುಡು –ಪಿಟಿಐ ಚಿತ್ರ
ಅಂಬಾಟಿ ರಾಯುಡು –ಪಿಟಿಐ ಚಿತ್ರ   

ಮುಂಬೈ: ಭಾರತ ತಂಡದ ಮಾಜಿ ಕ್ರಿಕೆಟರ್‌ ಅಂಬಟಿ ರಾಯುಡು ಅವರು ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಸಿಪಿಎಲ್‌) ಸೇಂಟ್‌ ಕಿಟ್ಸ್‌ ಮತ್ತು ನೇವಿಸ್‌ ಪೈರೆಟ್ಸ್‌ ತಂಡವನ್ನು ಸೇರಿಕೊಂಡಿದ್ದಾರೆ.

2023ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) ಚಾಂಪಿಯನ್‌ ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಆಡಿದ್ದ 37 ವರ್ಷದ ಬ್ಯಾಟರ್‌ ರಾಯುಡು, ಸೇಂಟ್‌ ಕಿಟ್ಸ್‌ ತಂಡದೊಂದಿಗೆ ಸಹಿ ಮಾಡಿದ್ದಾರೆ. ಲೆಗ್‌ ಸ್ಪಿನ್ನರ್‌ ಪ್ರವೀಣ್ ತಾಂಬೆ ಬಳಿಕ ಸಿಪಿಎಲ್‌ನಲ್ಲಿ ಆಡಲಿರುವ ಭಾರತದ ಎರಡನೇ ಕ್ರಿಕೆಟಿಗ ಅವರಾಗಿದ್ದಾರೆ.

ಐಪಿಎಲ್‌ ಟೂರ್ನಿ ಬಳಿಕ ರಾಯುಡು ಅವರು ಅಮೆರಿಕದ ಮೇಜರ್‌ ಕ್ರಿಕೆಟ್‌ ಲೀಗ್‌ನಲ್ಲಿ (ಎಂಎಲ್‌ಸಿ) ಚೆನ್ನೈ ಸೂಪರ್‌ ಕಿಂಗ್ಸ್‌ನ ಸೋದರ ಫ್ರಾಂಚೈಸಿ ಟೆಕ್ಸಾ ಸೂಪರ್‌ ಕಿಂಗ್ಸ್ ಜತೆ ಸಹಿ ಮಾಡಿದ್ದರು.

ADVERTISEMENT

ಭಾರತದ ಕ್ರಿಕೆಟಿಗರು ನಿವೃತ್ತಿ ಪಡೆದು ವಿದೇಶಿ ಲೀಗ್‌ಗಳಿಗೆ ಹೋಗುವ ಮುನ್ನ ನಿಗದಿಯ ಅವಧಿಯ ಕೂಲಿಂಗ್ ಆಫ್‌ ನಿಯಮ ಜಾರಿಗೆ ತರಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಚಿಂತಿಸುತ್ತಿದೆ ಎಂದು ಹೇಳಿತ್ತು. ಈ ಕಾರಣಕ್ಕೆ ಅವರು ಎಂಎಲ್‌ಸಿ ಟೂರ್ನಿಯಲ್ಲಿ ಭಾಗವಹಿಸಿರಲಿಲ್ಲ.

ಆದರೆ, ಬಿಸಿಸಿಐ ಅಧಿಕೃತವಾಗಿ ಇನ್ನೂ ಘೋಷಣೆ ಮಾಡಿಲ್ಲ. ಹೀಗಾಗಿ, ರಾಯುಡು ಅವರು ಸಿಪಿಎಲ್‌ನತ್ತ ಹೆಜ್ಜೆ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.