ನವದೆಹಲಿ: ಭಾರತದ ಡೇರಿ ಉದ್ಯಮದ ದಿಗ್ಗಜ ಅಮುಲ್, ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಪ್ರಾಯೋಜಕತ್ವ ವಹಿಸಲಿದೆ ಎಂದು ಆಯಾ ದೇಶಗಳ ಕ್ರಿಕೆಟ್ ಮಂಡಳಿಗಳು ಗುರುವಾರ ಪ್ರಕಟಿಸಿವೆ.
ಜಂಟಿ ಆತಿಥ್ಯ ವಹಿಸುತ್ತಿರುವ ಅಮೆರಿಕ ಮೊದಲ ಬಾರಿ ಟೂರ್ನಿಯಲ್ಲಿ ಆಡುತ್ತಿದೆ. ಅಮೆರಿಕದಲ್ಲಿ ಹೆಚ್ಚಿನ ಪಂದ್ಯಗಳು ನಡೆಯಲಿವೆ. ಕೆಲವು ಪಂದ್ಯಗಳು, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿವೆ.
ಡೇರಿ ದಿಗ್ಗಜ ಅಮುಲ್ ವಿದೇಶಿ ತಂಡಗಳಿಗೆ ಪ್ರಾಯೋಜಕತ್ವ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ನೆದರ್ಲೆಂಡ್ಸ್, ದಕ್ಷಿಣ ಆಫ್ರಿಕಾ ಮತ್ತು ಅಫ್ಗಾನಿಸ್ತಾನ ತಂಡಗಳ ಪ್ರಾಯೋಜಕತ್ವ ವಹಿಸಿತ್ತು.
ಅಮುಲ್ ಹಾಲು, ಈಗ ಅಮೆರಿಕದಲ್ಲೂ ಮಾರುಕಟ್ಟೆ ಕಂಡುಕೊಂಡಿದೆ.
‘ಅಮುಲ್ 2019ರ ಏಕದಿನ ಸರಣಿಯಿಂದಲೂ ದಕ್ಷಿಣ ಆಫ್ರಿಕಾ ತಂಡದ ಜೊತೆ ಸಂಬಂಧ ಹೊಂದಿದೆ. ಈಗ ಈ ಬಾಂಧವ್ಯ ಮತ್ತಷ್ಟು ಬಲಗೊಳ್ಳುತ್ತಿದೆ. ಅವರಿಗೆ ಶುಭಹಾರೈಸುತ್ತಿದ್ದೇವೆ’ ಎಂದು ಅಮುಲ್ ಆಡಳಿತ ನಿರ್ದೇಶಕ ಜೀವನ್ ಮೆಹ್ತಾ ತಿಳಿಸಿದರು. ಅಮೆರಿಕ ತಂಡಕ್ಕೂ ಅವರು ಶುಭಹಾರೈಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.