ADVERTISEMENT

ಅಂತಿಮ ಏಕದಿನ: ನಮೀಬಿಯಾಕ್ಕೆ ಜಯ

ಪಿಟಿಐ
Published 11 ಜೂನ್ 2023, 21:58 IST
Last Updated 11 ಜೂನ್ 2023, 21:58 IST
   

ವಿಂಡ್‌ಹಾಕ್‌ (ನಮೀಬಿಯಾ): ಆತಿಥೇಯ ನಮೀಬಿಯಾ ತಂಡ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿತು. ಆದರೆ ಕರ್ನಾಟಕ ಸರಣಿಯನ್ನು 3–2 ರಿಂದ ಗೆದ್ದುಕೊಂಡಿತು.

ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಕರ್ನಾಟಕ 48.1 ಓವರುಗಳಲ್ಲಿ 231 ರನ್‌ಗಳಿಗೆ ಆಲೌಟ್ ಆಯಿತು. ನಿಕಿನ್‌ ಜೋಸ್‌ 55 ಎಸೆತಗಳಲ್ಲಿ ಒಂದು ಸಿಕ್ಸರ್‌, ನಾಲ್ಕು ಬೌಂಡರಿಗಳಿದ್ದ 61 ರನ್ ಹೊಡೆದರು. ಉತ್ತರವಾಗಿ ನಮೀಬಿಯಾ ತಂಡ 39.1 ಓವರುಗಳಲ್ಲಿ (5 ವಿಕೆಟ್‌ಗೆ 236 ರನ್) ಗುರಿತಲುಪಿತು. ಆರಂಭ ಆಟಗಾರ ಸ್ಟೀಫನ್‌ ಬಾರ್ಡ್‌ (59), ಮೈಕೆಲ್‌ ವಾನ್‌ ಲಿಂಜೆನ್‌ (56) ಮತ್ತು ನಾಯಕ ಗೆರಾರ್ಡ್‌ ಎರಾಸ್ಮಸ್‌ (ಔಟಾಗದೇ 59) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸ್ಕೋರುಗಳು: ಕರ್ನಾಟಕ: 48.1 ಓವರುಗಳಲ್ಲಿ 231 (ಕಿಶನ್‌ ಬೆಡಾರೆ 43, ಕೃತಿಕ್‌ ಕೃಷ್ಣ 25, ನಿಕಿನ್‌ ಜೋಸ್‌ 61, ಅನೀಶ್ವರ್ ಗೌತಮ್ 29; ಯಾನ್‌ ಫ್ರಿಲಿಂಕ್‌ 28ಕ್ಕೆ2, ಬರ್ನಾರ್ಡ್‌ ಶೋಲ್ಜ್ 33ಕ್ಕೆ3, ಹಂಡ್ರೆ ಕ್ಲಾಝಿಂಗೆ 56ಕ್ಕೆ3); ನಮೀಬಿಯಾ: 39.1 ಓವರುಗಳಲ್ಲಿ 5 ವಿಕೆಟ್‌ಗೆ 236 (ಸ್ಟೀಫನ್ ಬಾರ್ಡ್‌ 59, ಮೈಕೆಲ್‌ ವಾನ್ ಲಿಂಜೆನ್ 56, ಗೆರಾರ್ಡ್‌ ಎರಾಸ್ಮಸ್ ಔಟಾಗದೇ 59, ಮಿಕಾವ್ ಡುಪ್ರೀಝ್ 38; ಕಿಶನ್‌ ಬೆಡಾರೆ 52ಕ್ಕೆ2).

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.