ADVERTISEMENT

ಟಿ20 ಕ್ರಿಕೆಟ್: ಬಟ್ಲರ್–ಮಲಾನ್ ಮಿಂಚು; ಆಸಿಸ್ ವಿರುದ್ಧ ಸರಣಿ ಗೆದ್ದ ಇಂಗ್ಲೆಂಡ್

ಏಜೆನ್ಸೀಸ್
Published 7 ಸೆಪ್ಟೆಂಬರ್ 2020, 2:21 IST
Last Updated 7 ಸೆಪ್ಟೆಂಬರ್ 2020, 2:21 IST
ಜಾಸ್‌ ಬಟ್ಲರ್‌ ಬ್ಯಾಟಿಂಗ್‌ ವೈಖರಿ
ಜಾಸ್‌ ಬಟ್ಲರ್‌ ಬ್ಯಾಟಿಂಗ್‌ ವೈಖರಿ   

ಸೌತಾಂಪ್ಟನ್: ಆಸ್ಟ್ರೇಲಿಯಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲೂ ಜಯ ಸಾಧಿಸಿದ ಇಂಗ್ಲೆಂಡ್‌ ಮೂರು ಪಂದ್ಯಗಳ ಸರಣಿಯನ್ನು ಗೆದ್ದು ಬೀಗಿತು.

ಪಂದ್ಯದಲ್ಲಿಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿತ್ತು. ಆಂಗ್ಲ ಪಡೆಯ ವೇಗಿ ಜೋಫ್ರಾ ಆರ್ಚರ್‌ಮೊದಲ ಓವರ್‌ನಲ್ಲಿಯೇ ಡೇವಿಡ್ ವಾರ್ನರ್ (0) ವಿಕೆಟ್‌ ಪಡೆದ ಆಘಾತ ನೀಡಿದರು. ಬಳಿಕ ಬಂದ ಅಲೆಕ್ಸ್‌ ಕಾರಿ (2), ಸ್ಟೀವ್‌ ಸ್ಮಿತ್‌ (10) ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ, ಗಟ್ಟಿಯಾಗಿ ನೆಲೆಯೂರಿದನಾಯಕ ಆ್ಯರನ್‌ ಫಿಂಚ್ (40)‌ ತಮ್ಮ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವಆತಂಕದಿಂದ ಪಾರು ಮಾಡಿದರು.ಮಾರ್ಕಸ್ ಸ್ಟೊಯಿನಿಸ್‌, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಆ್ಯಶ್ಟನ್ ಅಗರ್ ಜೊತೆಗೂಡಿ ಉತ್ತಮ ಆಟವಾಡಿದರು.

ಇವರ ಆಟದ ಬಲದಿಂದ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 157 ರನ್‌ ಗಳಿಸಿತು.

ADVERTISEMENT

ಈ ಮೊತ್ತದೆದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಆಂಗ್ಲ ಪಡೆ ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.ಮೊದಲ ಪಂದ್ಯದಲ್ಲಿಯೂ ಮಿಂಚಿದ್ದಜಾಸ್‌ ಬಟ್ಲರ್‌ ಹಾಗೂ ಡೇವಿಡ್‌ ಮಲಾನ್‌ ಇನ್ನೊಮ್ಮೆ ಉತ್ತಮ ಪ್ರದರ್ಶನ ನೀಡಿ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.

54 ಎಸೆಗಳನ್ನು ಎದುರಿಸಿ ಔಟಾಗದೆ ಉಳಿದ ಬಟ್ಲರ್‌ 8 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 77 ರನ್‌ ಚಚ್ಚಿದರೆ, ಮಲಾನ್‌ 32 ಎಸೆತಗಳಲ್ಲಿ 42 ರನ್‌ ಗಳಿಸಿದರು. ಅಂತಿಮವಾಗಿ ಇಂಗ್ಲೆಂಡ್‌ 18.5 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 158 ರನ್ ಗಳಿಸಿತು.

ಬಟ್ಲರ್‌ ಹಾಗೂಮಲಾನ್‌ ಮೊದಲ ಪಂದ್ಯದಲ್ಲಿ ಕ್ರಮವಾಗಿ 44 ಮತ್ತು 66 ರನ್‌ ಬಾರಿಸಿದ್ದರು.

ಸ್ಕೋರ್‌ ವಿವರ
ಆಸ್ಟ್ರೇಲಿಯಾ:
20 ಓವರ್‌ಗಳಲ್ಲಿ 7ಕ್ಕೆ 157 (ಆ್ಯರನ್ ಫಿಂಚ್ 40, ಮಾರ್ಕಸ್ ಸ್ಟೊಯಿನಿಸ್ 35, ಗ್ಲೆನ್ ಮ್ಯಾಕ್ಸ್‌ವೆಲ್ 26, ಆ್ಯಶ್ಟನ್ ಅಗರ್ 23; ಜೊಫ್ರಾ ಆರ್ಚರ್‌ 32ಕ್ಕೆ1, ಮಾರ್ಕ್ ವುಡ್ 25ಕ್ಕೆ1, ಆದಿಲ್ ರಶೀದ್ 25ಕ್ಕೆ1, ಕ್ರಿಸ್ ಜೋರ್ಡನ್ 40ಕ್ಕೆ2).

ಇಂಗ್ಲೆಂಡ್‌:18.5 ಓವರ್‌ಗಳಲ್ಲಿ 4ಕ್ಕೆ 158 (ಜಾಸ್‌ ಬಟ್ಲರ್‌ 77, ಡೇವಿಡ್‌ ಮಲಾನ್ 42,ಆ್ಯಶ್ಟನ್ ಅಗರ್27ಕ್ಕೆ2, ಮಿಚೇಲ್‌ ಸ್ಟಾರ್ಕ್‌ 25ಕ್ಕೆ 1,ಆ್ಯಡಂ ಜಂಪಾ 42ಕ್ಕೆ 1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.