ಚೆನ್ನೈ: ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಗಮನ ಸೆಳೆದಿದ್ದ ಆಟಗಾರರಲ್ಲಿ ಒಬ್ಬರಾದ ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಖರೀದಿಸಿದೆ.
₹ 20 ಲಕ್ಷಕ್ಕೆ ಮುಂಬೈ ಫ್ರಾಂಚೈಸಿ ಅರ್ಜುನ್ ತೆಂಡೂಲ್ಕರ್ ಅವರನ್ನು ಖರೀದಿಸಿದ್ದಾರೆ. ಅಪ್ಪ ಆಡಿದ್ದ ತಂಡಕ್ಕೆ ಮಗ ಸಹ ಸೇರ್ಪಡೆಗೊಳ್ಳುತ್ತಿರುವುದು ವಿಶೇಷವಾಗಿದೆ.
ಮುಂಬೈ ತಂಡದ ಆಟಗಾರರಾಗಿ, ನಾಯಕರಾಗಿ ತಂಡದ ಜೊತೆ ಸಚಿನ್ ತೆಂಡೂಲ್ಕರ್ ಗುರುತಿಸಿಕೊಂಡಿದ್ದರು. ಮಗನನ್ನು ಮುಂಬೈ ಫ್ರಾಂಚೈಸಿ ಖರೀದಿಸುವ ನಿರೀಕ್ಷೆ ಇತ್ತು.
ಈ ವರ್ಷ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಮುಂಬೈ ಹಿರಿಯ ತಂಡಕ್ಕೆ ಪಾದಾರ್ಪಣೆ ಮಾಡಿದ ಎಡಗೈ ವೇಗದ ಬೌಲರ್ ಅರ್ಜುನ್ ತೆಂಡೂಲ್ಕರ್ ₹ 20 ಲಕ್ಷ ಮೂಲ ಬೆಲೆಯೊಂದಿಗೆ ಆಲ್ರೌಂಡರ್ ವಿಭಾಗದ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಮೂಲ ಬೆಲೆಗೆ ಬಿಕರಿ ಯಾಗಿದ್ದಾರೆ.
ಇದನ್ನೂ ಓದಿ.. ಯಾವ ಆಟಗಾರ ಎಷ್ಟು ಬೆಲೆಗೆಸೇಲ್? ನೋಡಿ ಲೈವ್ ಬ್ಲಾಗ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.