ದಂಬುಲಾ: ಮಹಿಳಾ ಏಷ್ಯಾ ಕಪ್ 2024 ಫೈನಲ್ ಪಂದ್ಯ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿದೆ.
ಸ್ಮೃತಿ ಮಂದಾನ ಅವರ ಅರ್ಧಶತಕದ ಬಲದಿಂದ 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿದ ಭಾರತ ಮಹಿಳಾ ತಂಡ ಶ್ರೀಲಂಕಾಕ್ಕೆ 166 ರನ್‌ಗಳ ಗೆಲುವಿನ ಗುರಿ ನೀಡಿದೆ.
ಇಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾ ಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡು 165 ರನ್ ಗಳಿಸಿತು.
ಸ್ಮೃತಿ ಮಂದಾನ 47 ಎಸೆತಕ್ಕೆ 60 ರನ್ ಗಳಿಸಿದರೆ, ರಾಡ್ರಿಗಸ್ ಅವರು 16 ಎಸೆತಕ್ಕೆ 29 ರನ್ ಗಳಿಸಿದರು. ಉಳಿದಂತೆ ರಿಚಾ ಘೋಷ್ 14 ಎಸೆತಕ್ಕೆ 30 ರನ್‌ಗಳಿಸಿ ತಂಡಕ್ಕೆ ನೆರವಾದರು.
ಈ ಬಾರಿ ಟೂರ್ನಿಯುದ್ದಕ್ಕೂ ಪ್ರಾಬಲ್ಯ ಮೆರೆದಿರುವ ಭಾರತ ಅದನ್ನು ಮುಂದುವರಿಸಿ ದಾಖಲೆ ಎಂಟನೇ ಬಾರಿ ಟ್ರೋಫಿ ಗೆಲ್ಲುವ ಗುರಿಯಲ್ಲಿದೆ.
ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಏಳು ವಿಕೆಟ್‌ಗಳ ಜಯ ಗಳಿಸಿದ ಭಾರತ ವನಿತೆಯರು, ನಂತರದ ಪಂದ್ಯಗಳಲ್ಲಿ ಯುಎಇ ವಿರುದ್ಧ 78ರನ್‌ಗಳಿಂದ, ನೇಪಾಳ ವಿರುದ್ಧ 82 ರನ್‌ಗಳಿಂದ ಮತ್ತು ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ದ 10 ವಿಕೆಟ್‌ಗಳ ಸುಲಭ ಗೆಲುವು ಪಡೆದಿರುವುದು ತಂಡದ ಮೇಲುಗೈಯನ್ನು ಸೂಚಿಸುತ್ತಿದೆ.
ಭಾರತ ತಂಡ
ಶೆಫಾಲಿ ವರ್ಮಾ, ಉಮಾ ಚೆಟ್ರಿ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ತನುಜಾ ಕನ್ವಾರ್, ರೇಣುಕಾ ಸಿಂಗ್, ಜೆಮಿಮಾ ರಾಡ್ರಿಗಸ್, ಸ್ಮೃತಿ ಮಂದಾನ.
ಶ್ರೀಲಂಕಾ ತಂಡ
ರಶ್ಮಿ ಗುಣರತ್ನೆ, ಚಾಮರಿ ಅಥಾಪತ್ತು (ನಾಯಕಿ), ಹರ್ಷಿತಾ ಸಮರವಿಕ್ರಮ, ಹಾಸಿನಿ ಪೆರೇರಾ, ಅನುಷ್ಕಾ ಸಂಜೀವನಿ, ಕವಿಶಾ ದಿಲ್ಹಾರಿ, ನೀಲಾಕ್ಷಿಕಾ ಸಿಲ್ವಾ, ಇನೋಶಿ ಪ್ರಿಯದರ್ಶನಿ, ಉದೇಶಿಕಾ ಪ್ರಬೋಧನಿ, ಸುಗಂದಿಕಾ ಕುಮಾರಿ, ಸಚಿನಿ ನಿಸಂಸಲಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.