ದಂಬುಲಾ: ಚಾಮರಿ ಅಟಪಟ್ಟು ನಾಯಕತ್ವದ ಶ್ರೀಲಂಕಾ ಮಹಿಳೆಯರ ತಂಡವು ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ.
ಬುಧವಾರ ಇಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ತಂಡವು 10 ವಿಕೆಟ್‌ಗಳಿಂದ ಥಾಯ್ಲೆಂಡ್ ಎದುರು ಸುಲಭ ಜಯ ಸಾಧಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತು.
ಟಾಸ್ ಗೆದ್ದ ಥಾಯ್ಲೆಂಡ್ ತಂಡದ ನಾಯಕಿ ತಿಪಾಚಾ ಪುತಾವಾಂಗ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನೆನ್ನಪಾಟ್ ಕೊಂಚಾರೆಂಕಾಯ್ (ಔಟಾಗದೆ 47; 53ಎ, 4X5) ಅವರೊಬ್ಬರನ್ನು ಬಿಟ್ಟರೆ ಉಳಿದವರೆಲ್ಲರೂ ವಿಫಲರಾದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 93 ರನ್‌ಗಳ ಅಲ್ಪಮೊತ್ತ ಗಳಿಸಿತು.
ಗುರಿ ಬೆನ್ನಟ್ಟಿದ ಲಂಕಾ ತಂಡದ ಆರಂಭಿಕ ಜೋಡಿ ವಿಶ್ಮಿ ಗುಣರತ್ನೆ ಮತ್ತು ಚಾಮರಿ ಅಟಪಟ್ಟು ಅವರು ತಂಡವನ್ನು ಸುಲಭವಾಗಿ ಗೆಲುವಿನ ಗಡಿ ದಾಟಿಸಿದರು.
ಸಂಕ್ಷಿಪ್ತ ಸ್ಕೋರು: ಥಾಯ್ಲೆಂಡ್: 20 ಓವರ್‌ಗಳಲ್ಲಿ 7ಕ್ಕೆ 93 (ನೆನ್ನಪಾಟ ಕೊಂಚಾರೆಂಕಾಯ್ 47, ಕವೀಶಾ ದಿಲಹರಿ 13ಕ್ಕೆ2) ಶ್ರೀಲಂಕಾ: 11.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 94 (ವಿಶ್ಮಿ ಗಣರತ್ನೆ ಔಟಾಗದೆ 39, ಚಾಮರಿ ಅಟಪಟ್ಟು ಔಟಾಗದೆ 49) ಫಲಿತಾಂಶ: ಶ್ರೀಲಂಕಾ ತಂಡಕ್ಕೆ 10 ವಿಕೆಟ್‌ಗಳ ಜಯ.
ಸೆಮಿಫೈನಲ್ ಪಂದ್ಯಗಳು
ಭಾರತ–ಬಾಂಗ್ಲಾದೇಶ
ಶ್ರೀಲಂಕಾ–ಪಾಕಿಸ್ತಾನ
(ದಿನಾಂಕ: ಜುಲೈ 26)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.